ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳನ್ನು ಕೈಗೊಳ್ಳಲಾಗುವುದರಿಂದ ಡಿಸೆಂಬರ್ 1 ರಿಂದ 6 ರ ವರೆಗೆ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
220ಕೆವಿ ಕೇಮಾರ್-ವರಾಹಿ ವಿದ್ಯುತ್ ಮಾರ್ಗ-1 ಮತ್ತು 2 ರ ಲೊಕೇಷನ್ ನಂ. 375-376, 420-421 ಮತ್ತು 448-449 ರ ನಡುವೆ ಮಧ್ಯಂತರ ಗೋಪುರವನ್ನು ಅಳವಡಿಸುವ ಕಾಮಗಾರಿಯು ಪ್ರಗತಿಯಲ್ಲಿದ್ದು, ಸದರಿ ಲೊಕೇಷನ್‌ಗಳು ವಿದ್ಯುತ್ ಅಪಾಯದ ಸ್ಥಳವಾಗಿದ್ದು, ಸಾರ್ವಜನಿಕರ ಸುರಕ್ಷತೆ ದೃಷ್ಠಿಯಿಂದ ಕಾಮಗಾರಿಯನ್ನು ಆದ್ಯತೆ ಮೇರೆಗೆ ತ್ವರಿತವಾಗಿ ಪೂರ್ಣಗೊಳಿಸಬೇಕಾಗಿರುವುದರಿಂದ ಡಿಸೆಂಬರ್ 1 ರಿಂದ 6 ರ ವರೆಗೆ ಜಿಲ್ಲೆಯಾದ್ಯಂತ ಭಾಗಶಃ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
110/11ಕೆವಿ ಮಧುವನ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಬಾರ್ಕೂರು ಎಕ್ಸ್ಪ್ರೆಸ್ ಫೀಡರಿನಲ್ಲಿ ತುರ್ತು ನಿರ್ವಹಣೆ ಕಾಮಗಾರಿಯ ಕಾರಣದಿಂದ ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 2 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಂಬಂಧಪಟ್ಟ ಗ್ರಾಹಕರು ಮೆಸ್ಕಾಂನೊAದಿಗೆ ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.