ಬೆಂಗಳೂರು: ‘ಇನೋವಾ ಹೈಕ್ರಾಸ್’ ಅನಾವರಣಗೊಂಡಿದೆ. ಟೊಯೋಟ ಕಿರ್ಲೋಸ್ಕರ್ ಮೋಟರ್ ಕಂಪನಿಯು ಈ ಹೊಸ ಕಾರು ಟೊಯೋಟ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ (ಟಿಎನ್‌ಜಿಎ) ಆಧಾರಿತ 5ನೇ ಪೀಳಿಗೆಯ ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವ್ಯವಸ್ಥೆಯನ್ನು ಹೊಂದಿರುತ್ತದೆ.
ಹೇಗಿದೆ ಹೊಸ ಇನೋವಾ ಹೈಕ್ರಾಸ್?
ನೂತನ ಕಾರಿನಲ್ಲಿ 2.0 ಲೀಟರ್ 4 ಸಿಲಿಂಡರ್ ಗ್ಯಾಸೊಲಿನ್ ಎಂಜಿನ್ ಇದೆ. ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (ಇಪಿಬಿ), 6 ಎಸ್‌ಆರ್‌ಎಸ್ ಏರ್‌ಬ್ಯಾಗ್, ರಿಯರ್ ಡಿಸ್ಕ್ ಬ್ರೇಕ್ಸ್, ಹಿಲ್ ಸ್ಟಾರ್ಟ್ ಅಸಿಸ್ಟ್, ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಅನಾವರಣ ಸಂದರ್ಭದಲ್ಲಿ ಹೇಳಿಕೆ ನೀಡಿದ ಟೊಯೋಟ ಕಂಪನಿಯ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್, ಜಾಗತಿಕ ಮಟ್ಟದಲ್ಲಿ ಶುದ್ಧ ಮತ್ತು ಹಸಿರು ಇಂಧನ ಬಳಕೆಯನ್ನು ಹೆಚ್ಚಿಸಲು ಇದು ಸೂಕ್ತ ಸಮಯ ಎಂದಿದ್ದಾರೆ.