Thursday, November 14, 2024
Thursday, November 14, 2024

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬದ್ಧ: ಅಮಿತ್ ಶಾ

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬದ್ಧ: ಅಮಿತ್ ಶಾ

Date:

ನವದೆಹಲಿ: ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಬಿಜೆಪಿ ಕಟಿಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ ಟೈಮ್ಸ್‌ ನೌ ಶೃಂಗ ಸಭೆ 2022ರಲ್ಲಿ ಮಾತನಾಡಿದ ಅವರು, ಆರ್ಟಿಕಲ್ 370 ವಿಚಾರವಾಗಿ ಕೈ ಹಾಕಬಾರದು ಎಂಬ ಎಚ್ಚರಿಕೆಗಳು ಬರುತ್ತಲೇ ಇದ್ದವು. ಇವುಗಳನ್ನು ಲೆಕ್ಕಿಸದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೃಢಅವದ ನಿರ್ಧಾರ ಕೈಗೊಂಡಿತು.

ಅಧಿಕಾರಕ್ಕೆ ಬಂದರೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಲಾಗುವುದು ಎಂದು ಜನಸಂಘದ ಕಾಲದಿಂದಲೂ ಬಿಜೆಪಿ ಪಕ್ಷ ಹೇಳುತ್ತಿರುವುದನ್ನು ಸ್ಮರಿಸಿದ ಅಮಿತ್ ಶಾ, ಈ ದೇಶದ ಜನತೆಗೆ ಕೊಟ್ಟ ಮಾತನ್ನು ಈಡೇರಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಹೇಳಿದರು.

ಜಾತ್ಯತೀತ ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲ ಪ್ರಜೆಗಳಿಗೂ ಒಂದೇ ರೀತಿಯ ಕಾನೂನು ಇರಬೇಕು. ಸಂಸದೀಯ ಸಮಿತಿ ಕೂಡಾ ಸಂಸತ್‌ಗೆ ಇದೇ ಅಭಿಪ್ರಾಯವನ್ನು ಶಿಫಾರಸ್ಸು ಮಾಡಿದೆ. ಕೇಂದ್ರ ಸರ್ಕಾರವು ಶೀಘ್ರದಲ್ಲೇ ದೇಶಾದ್ಯಂತ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿಗೆ ತರಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ ಸಂಭ್ರಮ

ಉಡುಪಿ, ನ.13: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಪರ್ಯಾಯ...

ಮೀನುಗಾರರಿಗೆ ಎನ್.ಎಫ್.ಡಿ.ಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಉಡುಪಿ, ನ.13: ಅಸಂಘಟಿತ ವಲಯವಾದ ಮೀನುಗಾರಿಕೆ ವಲಯವನ್ನು ಸಂಘಟಿತ ವಲಯವಾಗಿ ರೂಪಿಸುವ...

ಆಳ್ವಾಸ್ ವಿರಾಸತ್-2024: ಮಳಿಗೆ ತೆರೆಯಲು ಆಹ್ವಾನ

ಮೂಡುಬಿದಿರೆ, ನ.13: ಇದೇ ಬರುವ ಡಿಸೆಂಬರ್ 10 ಮಂಗಳವಾರದಿಂದ 15ನೇ ಭಾನುವಾರದವರೆಗೆ...

ಜ್ಞಾನಸುಧಾ: ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಉಡುಪಿ, ನ.13: ರಾಷ್ಟ್ರದಾದ್ಯಂತ ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳನ್ನು ಗ್ರಾಮೀಣ ಬದುಕಿಗೆ ಬೆಸೆಯುವ...
error: Content is protected !!