ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಪದವು ಪಶ್ಚಿಮ ವಾರ್ಡಿನ ಮುಗ್ರೋಡಿ, ಅಚ್ಚುಕೋಡಿಯಲ್ಲಿ 75 ಲಕ್ಷ ರೂಪಾಯಿ ವೆಚ್ಚದಲ್ಲಿ ರಾಜಕಾಲುವೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ನಗರ ಪ್ರದೇಶದಲ್ಲಿ ಮಳೆಗಾಲದ ಸಂದರ್ಭದಲ್ಲಿ ರಾಜಕಾಲುವೆಯಿಂದ ಸಮಸ್ಯೆ ಪ್ರತಿವರ್ಷವೂ ಮರುಕಳಿಸುವ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ತರಲಾಗಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ನಗರ ಪ್ರದೇಶಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿದೆ. ಅತೀ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸ್ಥಳೀಯ ಕಾರ್ಪೋರೇಟರ್ ವನಿತಾ ಪ್ರಸಾದ್, ಮುಖಂಡರಾದ ರವಿಚಂದ್ರ, ಪ್ರಸಾದ್ ಆಚಾರ್ಯ, ಗಿರಿಧರ್ ಶೆಟ್ಟಿ, ಗೋಪಾಲ, ಬಾಬು ಶೆಟ್ಟಿ, ಶುಭಕರ್, ಪದ್ಮನಾಭ, ಸಂದೇಶ್, ರಂಜಿತ್, ಪವನ್, ಕಿರಣ್, ಪ್ರಸಾದ್, ನಿತೇಶ್ ದೇವಾಡಿಗ, ಗೋಪಾಲ ಪೂಜಾರಿ, ಚೇತನ್, ದಿವಾಕರ್, ಯಾದವ, ಜನಾರ್ದನ್, ಪ್ರಭಾಕರ್, ಪದ್ಮ, ಮಮತಾ, ಸುಶೀಲಾ, ಪ್ರೇಮಾ, ರಮ್ಯ, ರಾಧಾ, ಪೂರ್ಣಿಮಾ, ರಜನಿ, ವಸಂತಿ, ಗೋಪಾಲ, ಜಾನಕಿ, ಅನುಷಾ, ಹರ್ಷಿತ, ಜೀವನ್, ಚೇತನ, ಅಧಿಕಾರಿಗಳು ಉಪಸ್ಥಿತರಿದ್ದರು.