ಕೊಕ್ಕರ್ಣೆ: ಅಂಕಗಳಿಕೆಯೊಂದೇ ಶಿಕ್ಷಣದ ಪರಮ ಉದ್ದೇಶವಲ್ಲ ಎಂದು ಅಂಕಣಕಾರ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು. ಕೊಕ್ಕರ್ಣೆ ಸಮೀಪದ ನುಕ್ಕೂರು ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ವಿದ್ಯಾರ್ಥಿ ಮತ್ತು ರಕ್ಷಕ ಸಮಾವೇಶದಲ್ಲಿ ಸಮಾರೇೂಪ ಉಪನ್ಯಾಸ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತನ್ನು ಸಮರ್ಥವಾಗಿ ಎದುರಿಸುವ ಇಚ್ಛಾಶಕ್ತಿ ಕೌಶಲಶಕ್ತಿ ಸಂವಹನಶಕ್ತಿ ಎಳೆಯ ಪ್ರಾಯದಲ್ಲಿಯೇ ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ಹಾಗಾಗಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಹೆತ್ತವರನ್ನು ಉತ್ತೇಜಿಸುವ ಅಗತ್ಯವಿದೆ ಎಂದು
ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯಸ್ಥ ವಿಜಯಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿ.ಆರ್.ಪಿ.ಶಿಕ್ಷಕಿ ದೀಪಾ ಬಹುಮಾನ ವಿತರಿಸಿದರು. ಪ್ರಾಧ್ಯಾಪಕಿ ಸುಜಾತ ಕುಮಾರಿ ಸ್ವಾಗತಿಸಿ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.