ಉಡುಪಿ: ಯುವವಾಹಿನಿ (ರಿ) ಉಡುಪಿ ಘಟಕದಿಂದ ವಿದ್ಯಾನಿಧಿ ಕಾರ್ಯಕ್ರಮ ಯುವವಾಹಿನಿ ಸಭಾಂಗಣದಲ್ಲಿ ಜರಗಿತು. ಶೈಕ್ಷಣಿಕವಾಗಿ ಸಾಧನೆ ಮಾಡಿದ ಭರತ್, ಲೇಖನ, ಶ್ರಾವ್ಯಾ ಹಾಗೂ ಪೂಜಾ ಇವರನ್ನು ಸನ್ಮಾನಿಸಲಾಯಿತು.
ಕೋಶಾಧಿಕಾರಿ ಸುಜಾತ ಪ್ರವೀಣ್ ಸನ್ಮಾನಿತರನ್ನು ಪರಿಚಯಿಸಿದರು. ವಿದ್ಯಾನಿಧಿಗೆ ಸಂಗ್ರಹಿಸಿದ ದೇಣಿಗೆ ರೂ 52,000 ನ್ನು ಪ್ರವೀಣ್ ಡಿ ಪೂಜಾರಿ ಹಾಗೂ ಭಾಸ್ಕರ ಪೂಜಾರಿ ಅಲೆವೂರು ಅಧ್ಯಕ್ಷರಿಗೆ ಹಸ್ತಾಂತರಿಸಿದರು.
16 ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ನೀಡಿ ಪ್ರೋತ್ಸಾಹಿಸಲಾಯಿತು. ಮುಖ್ಯ ಅತಿಥಿಗಳನ್ನು ದಯಾನಂದ ಕರ್ಕೇರ ಪರಿಚಯಿಸಿದರು. ಪರ್ಕಳ ಶೆಟ್ಟಿಬೆಟ್ಟು ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ಅಮೃತ್‌ರಾಜ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಉನ್ನತಿಯ ಜೊತೆಗೆ ಸಂಸ್ಕಾರಯುತ ಬದುಕನ್ನು ರೂಢಿಸಿಕೊಳ್ಳಬೇಕು.
ಗುರುಹಿರಿಯರ ಆದರ್ಶದಲ್ಲಿ ಸಮಾಜಮುಖಿಯಾಗಿ ಬೆಳೆಯಬೇಕು. ಯುವವಾಹಿನಿಯ ವಿದ್ಯೆ, ಉದ್ಯೋಗ, ಸಂಪರ್ಕ ತತ್ವಗಳಿಗೆ ಬದ್ದವಾಗಿದ್ದರೆ ಒಳಿತು ಸಾಧ್ಯ ಎಂದರು. ಮಹಾಬಲ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಘಟಕದ ಮಾಜಿ ಅಧ್ಯಕ್ಷರಾದ ದಯಾನಂದ ಪೂಜಾರಿ, ಸಂಚಾಲಕರಾದ ಭಾಸ್ಕರ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾನಿಧಿ ನಿರ್ದೇಶಕರಾದ ಪ್ರವೀಣ್ ಡಿ ಪೂಜಾರಿ ಪ್ರಸ್ತಾವಿಕವಾಗಿ ಮಾತನಾಡಿದರು. ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ಮಹಾಬಲ ಸ್ವಾಗತಿಸಿ, ಕಾರ್ಯದರ್ಶಿ ವಿನೋದ್ ಮಂಚಿ ವಂದಿಸಿದರು. ಶ್ರೀಲಕ್ಷ್ಮೀ ಹಾಗೂ ನವೀಷಾ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತ ಮತ್ತು ಜ್ಞಾನೇಶ್ವರಿ ಪ್ರಾರ್ಥನೆ ನೆರವೇರಿಸಿದರು.