ಉಡುಪಿ: ಉಡುಪಿ ಭಾರತೀಯ ವೈದ್ಯ ಸಂಘ ಉಡುಪಿ ಕರಾವಳಿ ಇದರ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಬೃಹತ್ ವಾಕಥಾನ್ ಜಾಗೃತಿ ನಡಿಗೆ ಕಾರ್ಯಕ್ರಮ ಭಾನುವಾರ ನಡೆಯಿತು. ನಗರದ ಬೋರ್ಡ್ ಶಾಲಾ ಆವರಣದಿಂದ ಅಂಬಲಪಾಡಿ ದೇವಳದವರೆಗೆ ನಡೆದ ಈ ವಾಕಥಾನ್ ಅಭಿಯಾನಕ್ಕೆ ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್ ಚಾಲನೆ ನೀಡಿ ಮಾತನಾಡಿದರು.
ಭಾರತವು ಮಧುಮೇಹದ ರಾಜಧಾನಿಯಾಗುವ ಅಪಾಯವಿದೆ. ಜಗತ್ತಿನ ಒಟ್ಟು ಮಧುಮೇಹ ರೋಗಿಗಳಲ್ಲಿ ಶೇ.25 ರಷ್ಟು ಭಾರತದಲ್ಲಿರುವುದು ಗಂಭೀರವಾಗಿ ಚಿಂತನೆ ಮಾಡುವ ವಿಷಯವಾಗಿದೆ. ಉತ್ತಮ ಶಿಸ್ತುಬದ್ಧ ಜೀವನ ಪದ್ಧತಿ, ಆಹಾರ ಪದ್ಧತಿಯಿಂದ ಈ ರೋಗವನ್ನು ದೂರ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ.ಎಂ.ಎ ಅಧ್ಯಕ್ಷ ಡಾ. ಪಿ.ವಿ ಭಂಡಾರಿ ವಹಿಸಿ ಶುಭ ಹಾರೈಸಿದರು. ಕಾರ್ಯದರ್ಶಿ ಡಾ. ಕೇಶವ ನಾಯಕ್, ಡಾ. ಶ್ರತಿ ಬಲ್ಲಾಳ, ಡಾ. ವೈ.ಎಸ್ ರಾವ್, ಡಾ. ಯು.ಎಸ್ ಪಾಟೀಲ್, ಡಾ. ಸುಲತಾ ಭಂಡಾರಿ, ಡಾ. ದೀಪಕ್ ಮಲ್ಯ, ಡಾ. ಮಾನಸ್ ಸಹಿತ ಹಲವಾರು ವೈದ್ಯರು ಉಪಸ್ಥಿತರಿದ್ದರು.
ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಧುಮೇಹ ತಜ್ಞ ಡಾ. ಶೃತಿ ಬಲ್ಲಾಳ ರವರು ಮಧುಮೇಹ ಬಗ್ಗೆ ಮಾಹಿತಿ ನೀಡಿದರು. ಡಾ. ನಿ. ಬಿ. ವಿಜಯ ಬಲ್ಲಾಳ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಆರ್.ಎನ್ ಭಟ್, ಡಾ. ಇಂದಿರಾ ಶಾನುಭಾಗ್, ಡಾ. ಸ್ನೇಹಾ ಆಚಾರ್ಯ ಭಾಗವಹಿಸಿದ್ದರು.