ಉಡುಪಿ: ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್ ಇದರ ಅಂಗ ಸಂಸ್ಥೆಯಾದ ಮೆಡಿಕೇರ್ ಕ್ಲಿನಿಕಲ್ ಮತ್ತು ಡೈಯಗ್ನಾಸ್ಟಿಕ್ಸ್ ಲ್ಯಾಬ್ ನಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ನವೆಂಬರ್ 14 ರಿಂದ 20 ವರೆಗೆ ಒಂದು ವಾರಗಳ ಕಾಲ ಬೆಳಿಗ್ಗೆ 6.30 ರಿಂದ 9.00 ಗಂಟೆಯವರೆಗೆ ಉಚಿತ ಮಧುಮೇಹ ಪರೀಕ್ಷೆ ನಡೆಯಲಿದೆ. ಫಾಸ್ಟಿಂಗ್ ಮತ್ತು ರೇಂಡಮ್ ಈ ಎರಡೂ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್ ಸಿಎಂಡಿ ರವೀಂದ್ರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 8217644823
ವಿಳಾಸ: ಮೆಡಿಕೇರ್ ಕ್ಲಿನಿಕಲ್ ಮತ್ತು ಡೈಯಗ್ನಾಸ್ಟಿಕ್ಸ್ ಲ್ಯಾಬ್- ಪೈ ಸೇಲ್ಸ್ ಹಿಂಬದಿ, ಕೋರ್ಟ್ ಸೈಡ್ ರಸ್ತೆ ಉಷಾ ಹೊಟೇಲ್ ಎದುರು, ಉಡುಪಿ