ನವದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಮಾರಂಭವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿದ್ದಾರೆ. ಧೋನಿಯ ರಾಜಕೀಯ ಜೀವನದ ಆರಂಭವೇ? ಧೋನಿ ಬಿಜೆಪಿ ಸೇರುತ್ತಾರೆಯೇ? ಮುಂದಿನ ವರ್ಷದ ಐಪಿಎಲ್ ಬಳಿಕ ಧೋನಿ ಐಪಿಎಲ್ ನಿಂದಲೂ ನಿವೃತ್ತಿ ಪಡೆಯುವುದು ಬಹುತೇಕ ಖಚಿತವಾಗಿದ್ದು ಬಳಿಕ ರಾಜಕೀಯ ರಂಗ ಪ್ರವೇಶ ಮಾಡಲಿದ್ದಾರೆ ಎಂಬಿತ್ಯಾದಿ ಬಿಸಿ ಬಿಸಿ ಚರ್ಚೆಗಳು ಜಾಲತಾಣಗಳಲ್ಲಿ ನಡೆಯುತ್ತಿವೆ.
ಇಬ್ಬರೂ ಹಸ್ತಲಾಘವ ಮಾಡಿದ ಚಿತ್ರ ವೈರಲ್ ಆಗಿದೆ. ಚೆನ್ನೈ ಮೂಲದ ಸಿಮೆಂಟ್ ಕಂಪೆನಿಯ ಕಾರ್ಯಕ್ರಮದಲ್ಲಿ ಈ ಸಿಮೆಂಟ್ ಕಂಪೆನಿಯ ರಾಯಭಾರಿಯಾಗಿರುವ ಧೋನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಗೃಹ ಸಚಿವ ಅಮಿತ್ ಷಾ ಕಾರ್ಯಕ್ರಮದಲ್ಲಿದ್ದರು. ಇಬ್ಬರೂ ಮುಖತಃ ಭೇಟಿಯಾಗಿ ಕೆಲಹೊತ್ತು ಪರಸ್ಪರ ಮಾತನಾಡಿದರು.