ಮಲ್ಪೆ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮಲ್ಪೆ ಕಡಲ ತೀರದಿಂದ ಸೀ ವಾಕ್ ವರೆಗಿನ ಕಡಲ ತೀರದ ಸ್ವಚ್ಛತಾ ಕಾರ್ಯಕ್ರಮ ಮಂಗಳವಾರ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಉಡುಪಿ ನಗರಸಭೆ ಸಹಕಾರದೊಂದಿಗೆ ನಡೆಯಿತು.
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸಾಧು ಸಾಲ್ಯಾನ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಿತಿ ಅಧ್ಯಕ್ಷರಾದ ಪಾಂಡುರಂಗ ಮಲ್ಪೆ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ನಗರಸಭಾ ಸದಸ್ಯರಾದ ವಿಜಯ ಕುಂದರ್ ಶುಭ ಹಾರೈಸಿದರು. ಮಲ್ಪೆಯ ಐದು ಭಜನಾ ಮಂದಿರಗಳಾದ ಶ್ರೀ ಹನುಮಾನ್ ವಿಠೋಬ ಭಜನಾ ಮಂದಿರ ಹನುಮಾನ್ ನಗರ, ಬಾಲಕರ ಶ್ರೀ ರಾಮ ಭಜನಾ ಮಂದಿರ ಕೊಳ, ಶ್ರೀ ಶಿವಪಂಚಾಕ್ಷರಿ ಭಜನಾ ಮಂದಿರ ಕೊಳ, ಶ್ರೀ ಜ್ಞಾನಜ್ಯೋತಿ ಭಜನಾ ಮಂದಿರ ಕಡಲತೀರ ಮಲ್ಪೆ, ಭಕ್ತಿ ಉದಯ ಶ್ರೀ ಪಂಡರಿನಾಥ ಭಜನಾ ಮಂದಿರ, ವಡಭಾಂಡೇಶ್ವರ ಇದರ ಮಾತೃ ಮಂಡಳಿಯ ಸದಸ್ಯರು, ಮಲ್ಪೆ ಬೀಚ್ ಗುತ್ತಿಗೆದಾರರಾದ ಮಂತ್ರ ಟೂರಿಸಮ್ ಸುದೇಶ್ ಶೆಟ್ಟಿ ಮತ್ತು ತಂಡ, ಮಲ್ಪೆ ಬೀಚ್ ಪ್ರವಾಸಿ ಬೋಟ್, ಅಂಗಡಿ ವ್ಯಾಪಾರಸ್ಥರು, ಬೀಚ್ ವ್ಯಾಪಾರಸ್ಥರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು.