ಕಾಂತಾರ ಚಿತ್ರವನ್ನು ವೀಕ್ಷಿಸಿದೆ. ರಿಷಬ್ ಶೆಟ್ಟಿ ಅವರು ಅದ್ಬುತವಾಗಿ ನಟಿಸಿದ್ದಾರೆ. ಕಾಡಿನ ಜನರ ಅಳಿವು ಉಳಿವಿನ ಹೋರಾಟ ಒಂದೆಡೆಯಾದರೆ, ನಾಡಿನ ಬಂಡವಾಳಶಾಹಿಗಳ ಕರಾಳತೆ ಮತ್ತೊಂದೆಡೆ ಇವೆಲ್ಲವನ್ನೂ ನಿರ್ದೇಶಕರು ಅದ್ಭುತವಾಗಿ ಚಿತ್ರಿಸಿದ್ದಾರೆ.
ಕರಾವಳಿಯ ದೈವಾರಾಧನೆ ಮತ್ತು ಕರ್ನಾಟಕದ ಭವ್ಯ ಸಾಂಸ್ಕೃತಿಕ ಪರಂಪರೆ ಎಂತದ್ದು ಅನ್ನೋದನ್ನು ರಿಷಬ್ ಶೆಟ್ಟಿ ಅವರು ತೀರಾ ಸರಳವಾಗಿ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಹೊತ್ತು ಸಾಗುತ್ತಿರುವ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಭಾರತಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.
ಒಟ್ಟಾರೆಯಾಗಿ ಕಾಂತಾರ ಕನ್ನಡ ನಾಡಿನ ಅಸ್ಮಿತೆಯನ್ನು ಬಿಂಬಿಸುವ ಕನ್ನಡದ ಚಿತ್ರ ಎಂದರೆ ತಪ್ಪಾಗಲಾರದು. ವಿವಿಧತೆಯಲ್ಲಿ ಏಕತೆಗೆ ಹೆಸರಾಗಿರುವ ಕರ್ನಾಟಕದಲ್ಲಿ ಇನ್ನೂ ಅದೆಷ್ಟೋ ವಿಭಿನ್ನ ವಿನೂತನ ಸಂಸೃತಿಗಳಿವೆ. ಅವೆಲ್ಲವನ್ನೂ ಕನ್ನಡ ಚಿತ್ರರಂಗ ಬಳಸಿಕೊಂಡು ಚಲನಚಿತ್ರಗಳನ್ನು ರೂಪಿಸಿದರೆ ಕರ್ನಾಟಕದ ಭವ್ಯ ಸಾಂಸ್ಕೃತಿಕ ಪರಂಪರೆ ಇಡೀ ವಿಶ್ವಕ್ಕೆ ಪರಿಚಯವಾಗಲಿದೆ.
ಕಾಂತಾರ ಚಿತ್ರತಂಡದವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಜೊತೆಗೆ ಚಿತ್ರ ಇನ್ನಷ್ಟು ಯಶಸ್ಸು ಕಂಡು ಜನರ ಮನ್ನಣೆಯನ್ನು ಗಳಿಸಲಿ ಎಂದು ಹಾರೈಸುತ್ತೇನೆ.
-ಪ್ರಜ್ವಲ್ ರೇವಣ್ಣ- ಸಂಸದರು, ಹಾಸನ ಲೋಕಸಭಾ ಕ್ಷೇತ್ರ