Friday, September 20, 2024
Friday, September 20, 2024

ಕರ್ನಾಟಕದವರೇ ರಾಷ್ಟ್ರೀಯ ಕಾಂಗ್ರೆಸ್ ನ ಉನ್ನತವಾದ ಪೀಠವನ್ನು ಅಲಂಕರಿಸುತ್ತಿರುವುದು ಶುಭ ಸುದ್ಧಿ

ಕರ್ನಾಟಕದವರೇ ರಾಷ್ಟ್ರೀಯ ಕಾಂಗ್ರೆಸ್ ನ ಉನ್ನತವಾದ ಪೀಠವನ್ನು ಅಲಂಕರಿಸುತ್ತಿರುವುದು ಶುಭ ಸುದ್ಧಿ

Date:

ಗಾಂಧಿ ಕುಟುಂಬದವರು ಖರ್ಗೆಯವರನ್ನೆ ಯಾಕೆ ಆಯ್ಕೆ ಮಾಡಿಕೊಂಡರು ಅನ್ನುವುದು ಪ್ರಶ್ನೆ? ಇಂದು ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷಗಿರಿಗೆ ಚುನಾವಣೆ ನಡೆದಿದೆ ಅಂದರೆ ಕಾಂಗ್ರೆಸ್ ಆಂತರ್ಯವಾಗಿ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಗೌರವ ಕೊಡಲು ಮುಂದಾಗಿದೆ ಅನ್ನುವುದರ ಅರ್ಥವಲ್ಲ. ಬದಲಾಗಿ ಕಾಲದ ಅನಿವಾರ್ಯತೆ, ಹೊರತು ಆದರ್ಶತನ ಅಲ್ಲ ಅನ್ನುವುದು ಎಲ್ಲಿರಿಗೂ ತಿಳಿದ ಸತ್ಯ.

ಇಂದು ದೆಹಲಿಯಲ್ಲಿ ಮತದಾನ ಮಾಡಿದ ಅನಂತರದಲ್ಲಿ ಪಕ್ಷದ ಅಧ್ಯಕ್ಷೆ ಸೇೂನಿಯಾ ಗಾಂಧಿ ಹೇಳಿದ ಮಾತು ತುಂಬಾ ಇಂಟರೆಸ್ಟಿಂಗ್ ಆಗಿದೆ..”ನಾನು ಈ ಸಂದರ್ಭವನ್ನು ಬಹು ಕಾಲದಿಂದ ಕಾಯುತ್ತಿದ್ದೆ” ಅಂದರೆ ಈ ಮಾತಿನ ಅರ್ಥವೇನು? ಗಾಂಧಿ ಕುಟುಂಬ ಕಾಂಗ್ರೆಸ್ ಕಟ್ಟಿ ಬೆಳೆಸುವುದರಲ್ಲಿ ಸೇೂತಿದೆ ಅನ್ನುವುದರ ಅರ್ಥವಾ? ಅಥವಾ ಪಕ್ಷವನ್ನು ಬೇರೆಯವರ ಮಡಿಲಿಗೆ ಕೊಟ್ಟು ರಾಜಕೀಯದಿಂದ ವಿರಮಿಸುವುದು ಅನ್ನುವುದರ ಅರ್ಥವಾ? ಈ ಮಧ್ಯದಲ್ಲಿ ಗಾಂಧಿ ಕುಟುಂಬದ ಪರಮಾಪ್ತರಾದ ಚಿದಂಬರಂ ಹೇಳಿಕೆ ವಾಸ್ತವಿಕತೆಗೆ ಹಿಡಿದ ಕನ್ನಡಿಯಂತಿದೆ “ಯಾರೇ ಅಧ್ಯಕ್ಷರಾಗಲಿ ಗಾಂಧಿ ಕುಟುಂಬದ ಅಣತಿಯಂತೆ ನಡೆಯಬೇಕು” ಅನ್ನುವ ಸಂದೇಶವನ್ನು ಹೊರಡಿಸಿ ಬಿಟ್ಟಿದ್ದಾರೆ.

ಗಾಂಧಿ ಕುಟುಂಬದ ಬೇರಿನ ಕಾಂಗ್ರೆಸ್ ನ ಮುಂದಿನ ಅಧ್ಯಕ್ಷ ಆಯ್ಕೆಯ ಅರ್ಹತೆಗಳು ಹೇಗಿರುತ್ತದೆ..ಅಂದರೆ ಖರ್ಗೆಯವರನ್ನೇ ನೇೂಡಿ ಸ್ವಷ್ಟವಾಗಿ ತಿಳಿಯುತ್ತದೆ. ಅಧ್ಯಕ್ಷರಾಗುವರು ಯಾರೇ ಆಗಲಿ 75-80 ವರುಷ ದಾಟಿರಬೇಕು. ಮಾತ್ರವಲ್ಲದೇ ಲೇೂಕಸಭಾ ಚುನಾವಣೆಯಲ್ಲಿ ಸೇೂತಿರಬೇಕು. ಇಲ್ಲವಾದರೆ ಅವರೇ ನಮಗೆ ಪ್ರತಿಸ್ಪರ್ಧಿ ಗಳಾಗಬಹುದು. ಈ ದೃಷ್ಟಿಯಿಂದ ನೇೂಡಿದರೆ ತರೂರ್ ಹೆಚ್ಚು ಅಪಾಯಕಾರಿ. ಯಾಕೆಂದರೆ ತರೂರ್ ರಾಜಕೀಯವಾಗಿ ಇನ್ನೂ 65ರ ಗಡಿಯಲ್ಲಿ ಇದ್ದಾರೆ. ಮಾತ್ರವಲ್ಲ ಕೇರಳದಿಂದ ನಿರಂತರವಾಗಿ ಗೆದ್ದು ಬರುತ್ತಿದ್ದಾರೆ. ಈ ಆಹ೯ತೆ ಹೆಚ್ಚು ಅಪಾಯಕಾರಿ. ಹಾಗಾಗಿ ಖರ್ಗೆಯವರೇ ಹೆಚ್ಚು ಸೂಕ್ತ.

ರಾಜೀವ್ ಗಾಂಧಿ ಕಾಲದ ಅನಂತರ ಇದೇ ಪಿ.ವಿ.ನರಸಿಂಹರಾವ್ ರವರನ್ನು ಪ್ರಧಾನಿ ಮತ್ತು ಪಕ್ಷದ ಅಧ್ಯಕ್ಷ ಹುದ್ದೆಗೆ ಏರಿಸಿ ನರಸಿಂಹರಾಯರಿಂದ ಕಲಿತ ಪಾಠ ಇನ್ನೂ ಮಾಸಿಲ್ಲ. ಹಾಗಾಗಿ ಮುಂದೆ ಮನಮೇೂಹನರನ್ನು ಪ್ರಧಾನಿ ಮಾಡುವಾಗ ಕೂಡ ತುಂಬ ಜಾಗೃತೆ ವಹಿಸಿ ಅವರರ್ಹತೆ ಏನ್ನಿದ್ದರೂ ರಾಜ್ಯಸಭೆಗೆ ಸೀಮಿತ ಯಾವ ಸಂದರ್ಭದಲ್ಲಿಯೂ ನಮ್ಮನ್ನೇ ಪ್ರಶ್ನೆ ಮಾಡುವಷ್ಟು ಬೆಳೆಯಲು ಸಾಧ್ಯವಿಲ್ಲ ಅನ್ನುವ ಕಾರಣಕ್ಕಾಗಿಯೇ ಪ್ರಧಾನಿ ಪಟ್ಟ ಸುಲಭವಾಗಿ ಮನಮೋಹನ್ ಸಿಂಗ್ ಅವರಿಗೆ ಪ್ರಾಪ್ತವಾಯಿತು. ಅಲ್ಲಿಯೂ ಸಮರ್ಥ ನಾಯಕ ಪ್ರಣಬ್ ರನ್ನು ಬದಿಗೆ ಸರಿಸಲಾಯಿತು.

ಅಂತೂ ಕರ್ನಾಟಕದವರೇ ರಾಷ್ಟ್ರೀಯ ಕಾಂಗ್ರೆಸ್ ನ ಉನ್ನತವಾದ ಪೀಠವನ್ನು ಅಲಂಕರಿಸಲಿರುವ ಕನ್ನಡ ನಾಡಿನ ಎರಡನೇಯ ವ್ಯಕ್ತಿಯಾಗಿ ಮಲ್ಲಿಕಾರ್ಜುನ ಖರ್ಗೆ ಅನ್ನುವುದು ನಮ್ಮೆಲ್ಲರಿಗೂ ಶುಭ ಸಮಾಚಾರ. ಮಲ್ಲಿಕಾರ್ಜುನ ಖರ್ಗೆಯವರು ಈ ಎಲ್ಲಾ ಇತಿ ಮತಿಗಳನ್ನು ದಾಟಿ ಕಾಂಗ್ರೆಸ್ ಪಕ್ಷಕ್ಕೆ ಮರು ಹುಟ್ಟು ನೀಡುವಲ್ಲಿ ಯಶಸ್ವಿಯಾಗಲಿ ಅನ್ನುವುದು ನಮ್ಮೆಲ್ಲರ ಹಾರೈಕೆಯೂ ಹೌದು.

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ
(ರಾಜಕೀಯ ವಿಶ್ಲೇಷಕರು)

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!