Sunday, September 22, 2024
Sunday, September 22, 2024

ಯುವತಿಗೆ ವಿಡಿಯೋ ಕಾಲ್‌, ಲಕ್ಷಾಂತರ ರೂಪಾಯಿ ಕಳೆದುಕೊಂಡ ಪ್ರೊಫೆಸರ್‌

ಯುವತಿಗೆ ವಿಡಿಯೋ ಕಾಲ್‌, ಲಕ್ಷಾಂತರ ರೂಪಾಯಿ ಕಳೆದುಕೊಂಡ ಪ್ರೊಫೆಸರ್‌

Date:

ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯ ಜೊತೆ ವಿಡಿಯೋ ಕಾಲ್‌ ಮಾಡಿದ ಪ್ರೊಫೆಸರ್‌ ಒಬ್ಬರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ನಡೆದಿದೆ. ಧಾರವಾಡದ ಪ್ರೊಫೆಸರ್ ಒಬ್ಬರು ಹಣ ಕಳೆದುಕೊಂಡು ದೂರನ್ನು ನೀಡಿದ್ದಾರೆ.

ವಾಟ್ಸ್ಯಾಪ್‌ನಲ್ಲಿ ಪರಿಚಯವಾದ ಅಂಜಲಿ ಎಂಬ ಯುವತಿ ಜೊತೆ ಚಾಟ್‌ ಮಾಡುತ್ತಿದ್ದ ಪ್ರೊಫೆಸರ್ ಗೆ ಯುವತಿ ವಿಡಿಯೋ ಕಾಲ್ ಮಾಡಿದ್ದು, ಖಾಸಗಿ ಅಂಗಾಂಗ ತೋರಿಸುವಂತೆ ಪ್ರೊಫೆಸರ್ ಗೆ ಯುವತಿ ಪ್ರಚೋದಿಸಿದ್ದಾಳೆ. ಯುವತಿಯ ತಾಳಕ್ಕೆ ಕುಣಿದ ಪ್ರೊಫೆಸರ್ ಅವರ ಖಾಸಗಿ ಕ್ಷಣದ ವಿಡಿಯೋವನ್ನು ಯುವತಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು ಮಾತ್ರವಲ್ಲದೇ ಪ್ರೊಫೆಸರ್ ಗೆ ಬೆದರಿಕೆ ಹಾಕಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಡುವುದಾಗಿ ಯುವತಿ ಬೆದರಿಕೆ ಹಾಕಿದ್ದಾಳೆ.

ಇದರಿಂದ ಹೆದರಿದ ಪ್ರೊಫೆಸರ್ ಗೆ ಯುವತಿ ರೂ. 3 ಲಕ್ಷ ಬೇಡಿಕೆ ಇಟ್ಟಿದ್ದಳು. ಕೆಲವು ದಿನಗಳ ನಂತರ ವಿಕ್ರಮ್ ಎನ್ನುವ ವ್ಯಕ್ತಿ, ‘ನಾನು ಸೈಬರ್ ಅಧಿಕಾರಿ’ ಎಂದು ಪರಿಚಯಿಸಿಕೊಂಡು ಕರೆ ಮಾಡಿದ್ದಾನೆ. ʼ’ಅಂಜಲಿ ನನಗೆ ಗೊತ್ತು, 5 ಲಕ್ಷ ಹಣ ಕೊಡಿ, ಎಲ್ಲವನ್ನು ಬಗೆಹರಿಸುತ್ತೇನೆ’ ಎಂದು ಪ್ರೊಫೆಸರ್ ಗೆ ಒತ್ತಡ ಹಾಕಿದ್ದಾನೆ ಎನ್ನಲಾಗಿದೆ.

ಹಂತ ಹಂತವಾಗಿ ಪ್ರೊಫೆಸರ್ 21 ಲಕ್ಷ ರೂ. ಹಣವನ್ನು ಪಾವತಿಸಿದ್ದಾರೆ. ಹುಬ್ಬಳ್ಳಿ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೃಷಿ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ: ಭಾಸ್ಕರ್ ಸ್ವಾಮಿ

ಕೋಟ, ಸೆ.22: ಕೃಷಿ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ಪಂಚವರ್ಣದ...

ಕಸಾಪ ಉಡುಪಿ ತಾಲೂಕು ಘಟಕದಿಂದ ಪುಸ್ತಕಗಳ ಕೊಡುಗೆ

ಉಡುಪಿ, ಸೆ.22: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು...

ಬಾಸ್ಕೆಟ್ ಬಾಲ್: ಎಂ.ಜಿ.ಎಂ ಕಾಲೇಜು ಪ್ರಥಮ; ಕಾರ್ಕಳ ಜ್ಞಾನಸುಧಾ ಮತ್ತು ನಿಟ್ಟೆ ಕಾಲೇಜು ದ್ವಿತೀಯ

ಕಾರ್ಕಳ, ಸೆ.22: ಬಾಸ್ಕೆಟ್‌ಬಾಲ್ ಕ್ರೀಡೆಯು ಯುವಮನಸ್ಸುಗಳನ್ನು ಸೆಳೆಯುತ್ತಿದೆ. ಬಾಸ್ಕೆಟ್‌ಬಾಲ್ ಬಾಕ್ಸ್ನಂತೆ ಕ್ರೀಡಾಳುಗಳ...

ರಾಜ್ಯದ ದೇವಾಲಯಗಳಲ್ಲಿ ಮೊದಲಿನಿಂದಲೂ ಪರಿಶುದ್ಧ ಪ್ರಸಾದ

ಬೆಂಗಳೂರು, ಸೆ. 21: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ರಸಾದ,...
error: Content is protected !!