Monday, November 25, 2024
Monday, November 25, 2024

ಕಾಗಾಲ: 15-16ನೇ ಶತಮಾನದ ಶಾಸನ ಪತ್ತೆ

ಕಾಗಾಲ: 15-16ನೇ ಶತಮಾನದ ಶಾಸನ ಪತ್ತೆ

Date:

ಕುಮಟಾ: ಕುಮಟಾ ತಾಲ್ಲೂಕಿನ ಬಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಗಾಲ ಗ್ರಾಮದ ಮಹಾದೇವಿ ಮಹಾದೇವ ಪಟಗಾರ್ ಇವರಿಗೆ ಸೇರಿದ ತೋಟದಲ್ಲಿ ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಶಾಸನವೊಂದು ಪತ್ತೆಯಾಗಿದ್ದು, 4 ಅಡಿ ಎತ್ತರ ಹಾಗೂ 2 ಅಡಿ ಅಗಲವನ್ನು ಹೊಂದಿರುವ ಈ ಶಾಸನವು, 33 ಸಾಲುಗಳನ್ನು ಹೊಂದಿದ್ದು, ಕನ್ನಡ ಮತ್ತು ತಿಗಳಾರಿ ಲಿಪಿಯಲ್ಲಿದೆ.

ಶಾಸನವನ್ನು ಅಧ್ಯಯನ ಮಾಡಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಡದ ಇತಿಹಾಸ ಸಹಾಯಕ ಪ್ರಾಧ್ಯಾಪಕ ಮತ್ತು ಸಂಶೋಧನಾರ್ಥಿಯಾದ ರಹಿಮಾನ್ ಸಾಬ್ ಎಲ್ ಇವರು ಇದೊಂದು ದಾನ ಶಾಸನವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

ಶಾಸನದಲ್ಲಿ ಕಂಡುಬರುವ ಸಾಲುಗಳ ಮಾಹಿತಿಯ ಆಧಾರದ ಮೇಲೆ ಗಜನಿ ಪ್ರದೇಶ ಹಾಗೂ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳ ಭೂಮಿಯ ಬೆಳೆಯನ್ನು ಮತ್ತು ಅಕ್ಕಿ ಮುಡಿಯನ್ನು ವಿಶ್ವೇಶ್ವರ ಶ್ರೀಪಾದಂಗಳಿಗೆ ಮತ್ತು ಬ್ರಾಹ್ಮಣರ ಭೋಜನಕ್ಕೆ ದಾನವಾಗಿ ನೀಡಿರುವುದು ಕಂಡುಬರುತ್ತದೆ.

ಶಾಸನದ ಮೇಲ್ಭಾಗ ತೃಟಿತಗೊಂಡಿರುವರಿಂದ ದಾನವನ್ನು ಯಾರು? ಯಾವ ಕಾಲದಲ್ಲಿ ನೀಡಿದರು ಎಂಬುದು ಸ್ಪಷ್ಟವಾಗಿ ತಿಳಿದು ಬರುವುದಿಲ್ಲ.

ಆದರೆ ಲಿಪಿಯ ಆಧಾರದ ಮೇಲೆ ಈ ದಾನ ಶಾಸನವು 15-16ನೇ ಶತಮಾನಕ್ಕೆ (ವಿಜಯನಗರೋತ್ತರ ಕಾಲ) ಸೇರಿರಬಹುದೆಂದು ಸಂಶೋಧನಾರ್ಥಿಯು ತಿಳಿಸಿರುತ್ತಾರೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವನ್ನು ಕಾಣಬಹುದು.

ಶಾಸನದಲ್ಲಿ ಕನ್ನಡ ಲಿಪಿಯ ಜೊತೆಗೆ ಕೆಲವೊಂದು ತಿಗಳಾರಿ ಲಿಪಿಯನ್ನು ಹೋಲುವ ಅಕ್ಷರಗಳು ಕಂಡುಬರುವುದರಿಂದ ಈ ಶಾಸನವು ಅಧ್ಯಯನದ ದೃಷ್ಠಿಯಿಂದ ಮಹತ್ವದ್ದೆನಿಸುತ್ತದೆ.

ಶಾಸನವನ್ನು ಓದುವಲ್ಲಿ ಪ್ಲೀಚ್ ಇಂಡಿಯಾ ಫೌಂಡೇಶನ್ ಹೈದರಾಬಾದ್ ಇಲ್ಲಿನ ಸಹಾಯಕ ಸಂಶೋಧಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಸಹಕಾರ ನೀಡಿರುತ್ತಾರೆ. ಶಾಸನದ ಕ್ಷೇತ್ರಕಾರ್ಯ ಶೋಧನೆಯಲ್ಲಿ ಭಗೀರತ ಎಂ. ಗೌಡ ಹಾಗೂ ಭರತ್ ಪಟಗಾರ್ ಇವರು ಸಹಕಾರ ನೀಡಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!