Sunday, November 24, 2024
Sunday, November 24, 2024

ದೀಪಾವಳಿಯಿಂದ ಲಕ್ಷದೀಪೋತ್ಸವಕ್ಕೆ ಎರಡು ಅಪರೂಪದ ಗ್ರಹಣಗಳು

ದೀಪಾವಳಿಯಿಂದ ಲಕ್ಷದೀಪೋತ್ಸವಕ್ಕೆ ಎರಡು ಅಪರೂಪದ ಗ್ರಹಣಗಳು

Date:

ವರ್ಷ ದೀಪಾವಳಿ ಅಮಾವಾಸ್ಯೆ ಯಂದು (ಅಕ್ಟೋಬರ್ 25) ಪಾರ್ಶ್ವ ಸೂರ್ಯಗ್ರಹಣ, ಕಾರ್ತಿಕದ ಹುಣ್ಣಿಮೆಗೊಂದು (ನವಂಬರ್ 8) ಪಾರ್ಶ್ವ ಚಂದ್ರಗ್ರಹಣ. ಈ ಗ್ರಹಣಗಳು ಭಾರತಕ್ಕೆ ಪಾರ್ಶ್ವ ಗ್ರಹಣಗಳಾದರೂ ಈ ಎರಡೂ ಗ್ರಹಣಗಳು ಬಲು ಅಪರೂಪ. ಎಕೆಂದರೆ ಸೂರ್ಯಗ್ರಹಣ ಸೂರ್ಯಾಸ್ತಕ್ಕೆ, ಚಂದ್ರಗ್ರಹಣ ಚಂದ್ರ ಉದಯಕ್ಕೆ. ಇದೇ ಈ ಗ್ರಹಣಗಳ ವಿಶೇಷ.

ಅಕ್ಟೋಬರ್ 25, ಪಾರ್ಶ್ವ ಸೂರ್ಯಗ್ರಹಣ:

ಸಂಜೆ 5.08ಕ್ಕೆ ಪ್ರಾರಂಭವಾಗಿ 6.29 ಕ್ಕೆ ಅಂತ್ಯ. 5.50ಕ್ಕೆ ಅತ್ಯಂತ ಹೆಚ್ಚೆಂದರೆ 22 ಅಂಶ. ದೆಹಲಿಯವರಿಗೆ ಪಾರ್ಶ್ವ ಗ್ರಹಣ 55 ಅಂಶ. ಉಡುಪಿಯಲ್ಲಿ ಸೂರ್ಯಾಸ್ತ 6.06 ಕ್ಕೆ ಆ ದಿನವಾದುದರಿಂದ ಗ್ರಹಣದ ಸೂರ್ಯ ಕಣ್ಣು ಮಿಣುಕಿಸುವಂತೆ ಗ್ರಹಣದೊಂದಿಗೆ ಅಸ್ತಂಗತನಾಗುವನು. ಅದೊಂದು ರೋಚಕ ಸನ್ನಿವೇಶ. ಸೂರ್ಯ ಗ್ರಹಣವನ್ನು ಬರೆ ಕಣ್ಣಿಂದ ನೋಡಬಾರದು. ಗ್ರಹಣದ ಕನ್ನಡಕಗಳ ಮೂಲಕ ನೋಡಬಹುದು. ಈ ಗ್ರಹಣಗಳು ಅವುಗಳ ಕಾಲ ನಿರ್ಣಯ ಅನಾದಿಕಾಲದಿಂದ ಖಗೋಳಾಸಕ್ತರಿಗೊಂದು ಸವಾಲೇ. ಅವರ ಸಿದ್ಧಾಂತಗಳ ಸತ್ಯಾಸತ್ಯತೆಗೆ ಮಾನದಂಡ.

ನವಂಬರ್ 8ರ ಚಂದ್ರಗ್ರಹಣ:

ಹುಣ್ಣಿಮೆಯ ಚಂದ್ರ ಉದಯಿಸುವಾಗಲೇ 6.00 ಕ್ಕೆ ಪಾರ್ಶ್ವಗ್ರಹಣ. ಅದೂ ಬರೇ 19ನಿಮಿಷ ಮಾತ್ರ. ಸಂಜೆ 6.19 ಕ್ಕೆ ಗ್ರಹಣ ಮುಗಿಯುತ್ತದೆ. ಕಣ್ಣು ಮಿಣಕಿಸುವಂತೆ ಗ್ರಹಣದ ಚಂದ್ರನ ಉದಯ. ನೋಡಲು ಬಲು ಚೆಂದ. ಬರೇ ಕಣ್ಣಿಂದಲೇ ನೋಡಬಹುದು. ಈ ಗ್ರಹಣ ಮಧ್ಯಾಹ್ನ 2:39 ಕ್ಕೆ ಪಾರ್ಶ್ವ ಗ್ರಹಣ ಪ್ರಾರಂಭ. ಖಗ್ರಾಸ 3:46ಕ್ಕೆ ಖಗ್ರಾಸ ಅಂತ್ಯ 5:11ಕ್ಕೆ. ಪಾರ್ಶ್ವ ಅಂತ್ಯ 6:19ಕ್ಕೆ. ನಮಗೆ ಈ ಗ್ರಹಣದ ಅಂತ್ಯದಲ್ಲಿ ಬರೇ 19 ಲಭ್ಯ. ಅದೂ ಚಂದ್ರೋದಯದಲ್ಲಿ ಮಾತ್ರ ಲಭ್ಯ.

ಗ್ರಹಣಗಳು ಅಪರೂಪವೇ ನಲ್ಲ. ಪ್ರತೀ ಆರು ತಿಂಗಳಿಗೊಮ್ಮೆ ನಡೆಯುತ್ತಿರುತ್ತವೆ. ಆದರಲ್ಲಿ ಸೂರ್ಯ ಗ್ರಹಣವಾದರೆ ಭೂಮಿಯ ಕೆಲವೇ ಪ್ರದೇಶಕ್ಕೆ ಸೀಮಿತ. ಚಂದ್ರಗ್ರಹಣ ಅರ್ಧ ಭೂಮಿಗೆ ಗೋಚರಿಸಬಹುದು. ಪ್ರಖ್ಯಾತ ಖಗೋಳಶಾಸ್ತ್ರಜ್ಞ ಪ್ರೊ. ಜಯಂತ್ ವಿ ನಾರ್ಲೀಕರ್, ತಮ್ಮ ‘ಸೆವೆನ್ ವಂಡರ್ಸ್ ಆಫ್ ಕಾಸ್ಮಸ್’ ಪುಸ್ತಕದಲ್ಲಿ ಭೂಮಿಯಲ್ಲಿ ನಡೆಯುವ ಈ ಗ್ರಹಣಗಳು ಒಂದು ವಿಸ್ಮಯವೇ ಎನ್ನುತ್ತಾರೆ. ಈ ವಿಸ್ಮಯಗಳಿಗೆ ಅನೇಕ ಕಾರಣಗಳು.

ಸೂರ್ಯನಿಂದ ಭೂಮಿ ಹಾಗೂ ಚಂದ್ರರ ದೂರಗಳ ಅನುಪಾತ ಹಾಗೂ ಚಂದ್ರ ಮತ್ತು ಸೂರ್ಯನ ವ್ಯಾಸಗಳ ಅನುಪಾತ. ಇವೆರಡೂ ಸಮವಾಗಿರುವುದರಿಂದ ನಮಗೆ ಸೂರ್ಯ ಚಂದ್ರರು ಒಂದೇ ಗಾತ್ರದಲ್ಲಿರುವಂತೆ ಭಾಸವಾಗುವುದು. ಸೂರ್ಯ ಭೂಮಿಯ ಪಥಗಳ ಸಮತಲ ಸುಮಾರು 5 ಡಿಗ್ರಿ ಓರೆಯಾಗಿವೆ. ಈ ಸಮತಲಗಳು ಸಂಧಿಸುವಲ್ಲಿ, ಪ್ರತೀ ಆರು ತಿಂಗಳಿಗೊಮ್ಮೆ ಸೂರ್ಯ, ಚಂದ್ರ ಹಾಗೂ ಭೂಮಿ ನೇರ ಬರುವುದರಿಂದ ಈ ಗ್ರಹಣವೆಂಬ ನೆರಳು ಬೆಳಕಿನ ಆಟ ನಡೆಯುತ್ತಿರುತ್ತದೆ.

ಬೇರೆ ಗ್ರಹಗಳಲ್ಲಿ ಗ್ರಹಣಗಳ ಈ ವಿಸ್ಮಯ ನಡೆಯುವುದಿಲ್ಲ. ಆಕಾಶದಲ್ಲಿ ನಡೆಯುವ ಈ ಖಗೋಳ ಪ್ರಯೋಗ ಅದೆಷ್ಟು ದೂರದಲ್ಲಿ ನಡೆಯುತ್ತದೆಂದರೆ ತಮಗೆ ಆಶ್ಚರ್ಯವಾಗಬಹುದು. ಭೂಮಿ ಚಂದ್ರರ ಸರಾಸರಿ ದೂರ ಬರೇ 3 ಲಕ್ಷದ 84 ಸಾವಿರ ಕಿಮಿಯಾದರೆ, ಭೂಮಿ ಸೂರ್ಯರ ಸರಾಸರಿ ದೂರ ಸುಮಾರು 15 ಕೋ ಟಿ ಕಿಮೀ. ಅನಂತ ಆಕಾಶದಲ್ಲಿ ಗ್ರಹ ಸೂರ್ಯರ ನರ್ತನ. ಸೂರ್ಯನನ್ನು ಬರೇ ಕಣ್ಣಿನಿಂದ ಯಾವಾಗಲೂ ನೋಡಬಾರದು.

ಗ್ರಹಣ ಕಾಲದಲ್ಲೂ ಬರೆ ಕಣ್ಣಿನಿಂದ ನೋಡಬಾರದು. ಚಂದ್ರ ಗ್ರಹಣ ಬರೇ ಕಣ್ಣಿಂದ ನೋಡಿ ಆನಂದಿಸಬಹುದು.

-ಡಾ. ಎ. ಪಿ. ಭಟ್ ಉಡುಪಿ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತುಳು ಭಾವಗೀತೆ ಸ್ಪರ್ಧೆ

ಉಡುಪಿ, ನ.24: ತುಳುಕೂಟ ಉಡುಪಿ (ರಿ,) ವತಿಯಿಂದ ದಿ. ನಿಟ್ಟೂರು ಸಂಜೀವ...

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...

ವಯನಾಡ್: ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಗೆಲುವು

ವಯನಾಡ್, ನ.23: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್- ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.23: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್...
error: Content is protected !!