ಕೋಟ: ಯುವಕ ಮಂಡಲದ ಮುಖ್ಯ ಧ್ಯೇಯ ಸಮಾಜಮುಖಿ ಚಿಂತನೆಯಾಗಿರಬೇಕು, ಸಂಘಟಣೆಯ ಮೂಲಕ ಎಷ್ಟು ಸಾಧ್ಯವೋ ಅಷ್ಟು ಸಮಾಜಕ್ಕೆ ಒಳ್ಳೆಯ ಕೆಲಸಗಳಿಗೆ ತೊಡಗಿಸಿಕೊಳ್ಳಬೇಕು, ಕಳೆದ ಹಲವಾರು ವರ್ಷಗಳ ಶ್ರೀ ವಿನಾಯಕ ಯುವಕ ಮಂಡಲದ ಚಟುವಟಿಕೆ ಶ್ಲಾಘನೀಯ ಎಂದು ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರಮೂರ್ತಿ ಹೇಳಿದರು.
ಶ್ರೀ ವಿನಾಯಕ ಯುವಕ ಮಂಡಲ (ರಿ) ಸಾಯ್ಬ್ರಕಟ್ಟೆ-ಯಡ್ತಾಡಿ ಇವರ ಆಶ್ರಯದಲ್ಲಿ ನಡೆದ 11 ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ಹಾಗೂ ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರ ಪ್ರದಾನ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಸಮಾಜ ಸೇವಕ ರವಿ ಕಟಪಾಡಿ, ಸನ್ಮಾನ, ಪ್ರಶಸ್ತಿಗಳಿಂದ ಜವಾಬ್ದಾರಿ ಹೆಚ್ಚುತ್ತದೆ, ಅಲ್ಲದೇ ಇಂತಹ ಸನ್ಮಾನಗಳನ್ನು ನೋಡಿ ಒಂದಿಷ್ಟು ಸಂಘಟನೆ, ವ್ಯಕ್ತಿಗಳು ವೇಷ ಧರಿಸಿ ಅಶಕ್ತರ ನೆರವಾದರೆ ಸನ್ಮಾನದ ಸಾರ್ಥಕತೆ ಮೂಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ದೇವಾಡಿಗ ವಹಿಸಿದ್ದರು. ವೇದಿಕೆಯಲ್ಲಿ ಧಾರ್ಮಿಕ ಮುಖಂಡ ಪ್ರಸಾದ್ ಕಾಂಚನ್, ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ದೇವಾಡಿಗ, ಉದ್ಯಮಿ ಅಶೋಕ್ ಪ್ರಭು, ಶ್ರೀ ಗಣೇಶೋತ್ಸವ ಸಮಿತಿ ಜಂಬೂರು ಅಧ್ಯಕ್ಷರಾದ ರವೀಂದ್ರನಾಥ್ ಕಿಣಿ, ಮಹಾತ್ಮ ಗಾಂಧಿ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಸತೀಶ್ ನಾಯ್ಕ್, ಉದ್ಯಮಿ ಸಂಕಯ್ಯ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯಡ್ತಾಡಿ ವಲಯದ ಸೇವಾ ಪ್ರತಿನಿಧಿ ಆಶಾ ಉಪಸ್ಥಿತರಿದ್ದರು.
ಯುವಕ ಮಂಡಲದ ಸದಸ್ಯ ಅಜಿತ್ ಕುಮಾರ್ ಸ್ವಾಗತಿಸಿ, ರಾಘವೇಂದ್ರ ಹೆಸ್ಕೂತ್ತುರು ಕಾರ್ಯಕ್ರಮ ನಿರೂಪಿಸಿದರು.