ಉಡುಪಿ: ಉಡುಪಿ ಸಿಟಿ ಬಸ್ಸು ನಿಲ್ದಾಣದ ಸನಿಹದಲ್ಲಿರುವ ಪವಿತ್ರ ಅಶ್ವಥಕಟ್ಟೆಯ ಸ್ಥಳವು ಅಪವಿತ್ರಗೊಳ್ಳುತ್ತಿದೆ. ಕುಡುಕರ ಆಶ್ರಯ ತಾಣವಾಗಿದ್ದು, ಅಲ್ಲಿಯೇ ಶೌಚಾದಿ ಕ್ರಿಯೆ ನಡೆಸುವುದು, ಉಗುಳುವುದು, ಕಸ ತ್ಯಾಜ್ಯಗಳ ಎಸೆದು ಸ್ಥಳದ ಪ್ರಾವಿತ್ರ್ಯತೆ ಹಾಳು ಮಾಡುತ್ತಿರುವುದು ಕಂಡುಬಂದಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದಂತಾಗಿದೆ. ತಕ್ಷಣ ನಗರಸಭೆ ಇಲ್ಲಿ ಉಧ್ಭವವಾಗಿರುವ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಜರುಗಿಸಬೇಕು.
ಅಶ್ವಥಕಟ್ಟೆಯ ಒಳ ಪ್ರವೇಶ ತಡೆಯೊಡ್ಡಲು ಕಬ್ಬಿಣದ ಬೇಲಿ ಅಳವಡಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.