ಕೋಟ: ಕಾರಂತರ ಬದುಕಿನ ಪ್ರತಿಯೊಂದು ಹೆಜ್ಜೆಗಳು ಅನುಕರಣೀಯ. ಅವರ ಸಾಧನೆಯು ಯುವ ನಾಂಗದ ಬದುಕಿಗೆ ದಾರಿ ದೀಪವಾಗಿದ್ದು, ಕಾರಂತರ ವಿಚಾರಧಾರೆಗಳು ಮುಂದಿನ ಜನಾಂಗಕ್ಕೆ ತಲುಪಿಸಲು ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ಸಹಕಾರಿ.
ಇಲ್ಲಿ ನಡೆಯುವ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು ಹೊಸ ಭಾಷ್ಯಕ್ಕೆ ನಾಂದಿಯಾಗುತ್ತಿದೆ ಎಂದು ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಶೀಲಾ ಸೋಮಶೇಖರ್ ಹೇಳಿದರು. ಅವರು ಕೋಟದ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆದ ಉಡುಪಿ ಜಿಲ್ಲಾ ರಜತ ಸಡಗರ-ವಿಚಾರ ಸಂಕಿರಣ, ವಚನ ನಿನಾದ ಕಾರ್ಯಕ್ರಮ ವಿವಶ – 2022 (ಸರಿಗಮದ ಬಾನ್ದನಿ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಸಾಂಸ್ಕೃತಿಕ ಚಿಂತಕ ಮಂಜುನಾಥ ನಾಯರಿ, ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ಜಯರಾಮ್ ಶೆಟ್ಟಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಬಗ್ಗೆ ಸುದ್ದಿಮನೆ ಉಪಸಂಪಾದಕ ಉದಯ ಕನ್ಕಿಮಡಿ, ಜನಪದ ಸ್ಥಿತ್ಯಂತರ ಬಗ್ಗೆ ಕ.ಸಾ.ಪ ಬೈಂದೂರು ಅಧ್ಯಕ್ಷ ಡಾ. ರಘು ನಾಯಕ್, ಉಡುಪಿ ಜಿಲ್ಲೆಯ ಶಾಸನಗಳ ಬಗ್ಗೆ ಸಂಶೋಧಕ, ಬರಹಗಾರ ಪ್ರದೀಪ ಬಸ್ರೂರು ವಿಚಾರ ಸಂಕಿರಣವನ್ನು ನಡೆಸಿಕೊಟ್ಟರು.
ಶಾಸ್ತ್ರೀಯ ಸಂಗೀತಗಾರ್ತಿ ವಚನ ಗಾನ ವೈಭವ ಕವಿತಾ ಶೆಣೈ ಅವರಿಂದ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾಪಿಸಿ, ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಂಜುಳಾ ತೆಕ್ಕಟ್ಟೆ ನಿರೂಪಿಸಿದರು.