ಉಡುಪಿ: ರೋಟರಿ ಉಡುಪಿ, ಯೂನಿಯನ್ ಬ್ಯಾಂಕ್, ನೆಹರು ಯುವಕ ಕೇಂದ್ರ ಮತ್ತು ಸಮೃಧ್ಧಿ ಮಹಿಳಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಪೇತ್ರಿಯಲ್ಲಿ ಮಹಿಳಾ ಸಬಲೀಕರಣ ಕಾರ್ಯಾಗಾರ ನಡೆಯಿತು. ರೋಟರಿ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಯೂನಿಯನ್ ಬ್ಯಾಂಕ್ ನ ಉಡುಪಿ ವಲಯದ ಮುಖ್ಯಸ್ಥರಾದ ಡಾ.ಎಚ್.ಟಿ.ವಾಸಪ್ಪ, ಬ್ಯಾಂಕ್ ನಿಂದ ಸಿಗುವ ವಿವಿಧ ಸವಲತ್ತುಗಳ ಬಗ್ಗೆ ವಿವರಿಸಿ ಅದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು.
ಸಮೃದ್ಧಿ ಮಹಿಳಾ ಮಂಡಳದ ಅಧ್ಯಕ್ಷೆ ಪ್ರಸನ್ನ ಭಟ್ ಸ್ವಾಗತಿಸಿದರು. ರೋಟರಿ ಉಡುಪಿ ಅಧ್ಯಕ್ಷ ಸುಬ್ರಹ್ಮಣ್ಯ ಕಾರಂತ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಟರಿ ವಲಯ ಸಂಯೋಜಕ ದೀಪಾ ಭಂಡಾರಿ ರೋಟರಿ ಜಿಲ್ಲಾ ಯೋಜನೆಯಾದ ಮಹಿಳಾ ಸಬಲೀಕರಣದ ಬಗ್ಗೆ ವಿವರಿಸಿದರು.
ಪರಿಸರದ ಅತೀ ಅವಶ್ಯಕತೆಯುಳ್ಳ ಮೂವರು ಮಹಿಳೆಯರಿಗೆ ಯೂನಿಯನ್ ಬ್ಯಾಂಕ್ ನಿಂದ ಕೊಡಮಾಡಿದ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಬ್ಯಾಂಕ್ ನ ವಿವಿಧ ಯೋಜನೆಗಳ ಬಗ್ಗೆ ಅಧಿಕಾರಿ ಅಶೋಕ ಕೋಟ್ಯಾನ್ ಮಾಹಿತಿ ನೀಡಿದರು. ಚೈಲ್ಡ್ ಲೈನ್ ನ ಸಂಯೋಜಕಿ ಜ್ಯೋತಿ ಮಕ್ಕಳ ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದರು.
ಕಾರ್ಯದರ್ಶಿ ಗುರುರಾಜ ಭಟ್ ವಂದಿಸಿದರು. ಶುಭ ಬಾಸ್ರಿ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್ ಸಹಾಯಕ ಪ್ರಬಂಧಕರಾದ ರೋಸಲಿನ್ ರೋಡ್ರಿಗಸ್, ದಿನೇಶ ಭಂಡಾರಿ, ವನಿತಾ ಉಪಾಧ್ಯಾಯ, ಅಮಲ ಭಟ್, ರಾಮಣ್ಣ ನಾಯ್ಕ ಮತ್ತು ಮಹಿಳಾ ಮಂಡಳದ ಸದಸ್ಯರು ಉಪಸ್ಥಿತರಿದ್ದರು.