ಗಣಿತನಗರ: ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ತಿಳಿಸಿರುವ 22 ಭಾಷೆಗಳಲ್ಲಿ ಹಿಂದಿಯೂ ಕೂಡಾ ಪ್ರಮುಖ ಭಾಷೆಯಾಗಿದ್ದು, ಭಾರತೀಯರಲ್ಲಿ ಏಕತೆಯ ಮನೋಭಾವ ಮೂಡಿಸುವಲ್ಲಿ ಸಹಕಾರಿಯಾಗಿದೆ ಎಂದು ಹಿರಿಯಡ್ಕ ಸ.ಪ.ಪೂ.ಕಾಲೇಜಿನ ಹಿಂದಿ ಉಪನ್ಯಾಸಕ ಡಾ.ಅನಂತರಾಮ್ ನಾಯಕ್ ಎಂದರು.
ಅವರು ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನಲ್ಲಿ ನಡೆದ ಹಿಂದಿ ದಿವಸ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಹಿಂದಿಯ ಸ್ಥಾನಮಾನ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನಿದರ್ಶನ ಸಹಿತ ತೆರೆದಿಟ್ಟು ಭಾರತದಲ್ಲಿ ವಿವಿಧ ಜಾತಿ, ಧರ್ಮ, ಭಾಷೆ ಮಾತನಾಡುವ ಜನರಿದ್ದು ಎಲ್ಲರನ್ನು ಏಕತೆಯ ಎಳೆಯಲ್ಲಿ ಒಂದುಗೂಡಿಸುವ ಭಾಷೆ ಹಿಂದಿ ಎಂದರು.
ಹಿಂದಿ ದಿವಸದ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಂಶುಪಾಲ ದಿನೇಶ್.ಎಂ.ಕೊಡವೂರ್, ಉಪಪ್ರಾಂಶುಪಾಲ ಸಾಹಿತ್ಯ, ಹಿಂದಿ ವಿಭಾಗದ ಮುಖ್ಯಸ್ಥೆ ಯಶೋಧ ಆರ್. ಚೌಹಾನ್ ಉಪಸ್ಥಿತರಿದ್ದರು. ಹಿಭಾ ಸಾಮ್ರ ಸ್ವಾಗತಿಸಿ, ನಿಶಾ ಶೆಟ್ಟಿ ವಂದಿಸಿದರು. ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು.