Monday, November 25, 2024
Monday, November 25, 2024

ಮಕ್ಕಳ ಎರಡನೇ ಪಾಲಕರು ಪ್ರಾಥಮಿಕ ಶಾಲಾ ಶಿಕ್ಷಕರು: ಡಾ. ಮಹಾಬಲೇಶ್ವರ್‌ ರಾವ್‌

ಮಕ್ಕಳ ಎರಡನೇ ಪಾಲಕರು ಪ್ರಾಥಮಿಕ ಶಾಲಾ ಶಿಕ್ಷಕರು: ಡಾ. ಮಹಾಬಲೇಶ್ವರ್‌ ರಾವ್‌

Date:

ಕಾರ್ಕಳ: ಇಂದಿನ ಶಿಕ್ಷಣದಲ್ಲಿ ಸಾಮಾಜಿಕ ಜಾಲತಾಣಗಳ ಭರಾಟೆಯಿಂದ ರಸಕ್ಕಿಂತ ಕಸವೇ ಹೆಚ್ಚು ತುಂಬಿದೆ. ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಜೊತೆಗೆ ಪೋಷಕರು ಸಹ ಕೈ ಜೋಡಿಸಿದ್ದೆ ಆದರೆ ಆದರ್ಶ ಸಮಾಜ ನಿರ್ಮಾಣವಾಗಲು ಸಾದ್ಯ ಎಂದು ಉಡುಪಿಯ ಡಾ. ಟಿ.ಎಂ.ಎ.ಪೈ ಕಾಲೇಜ್‌ ಆಫ್‌ ಎಜ್ಯುಕೇಷನ್‌ ಸಂಸ್ಥೆಯ ಸಂಯೋಜನಾಧಿಕಾರಿ, ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್‌ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಹಿರಿಯ ಶಿಕ್ಷಕರನ್ನು ಗೌರವಿಸಿ ಮಾತನಾಡಿದರು.

ಮಕ್ಕಳ ಎರಡನೇ ಪಾಲಕರು ಪ್ರಾಥಮಿಕ ಶಾಲಾ ಶಿಕ್ಷಕರು. ಅಂತಹ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವ ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಷನ್‌ ಟ್ರಸ್ಟ್ನ ಕಾರ್ಯ ಅಭಿನಂದನೀಯ ಎಂದರು. ದೇಹಕ್ಕೆ ವಯಸ್ಸಾಗಬಹುದು ಹೊರತು ರಾಷ್ಟ್ರ ನಿರ್ಮಾಣದ ಭಾವಿ ಪ್ರಜೆಗಳನ್ನು ನಿರ್ಮಿಸುವ ಮಹಾನ್‌ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರ ವೃತ್ತಿಗಲ್ಲ ಎಂದರು,

ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ನ ವತಿಯಿಂದ ಕಾರ್ಕಳ ತಾಲೂಕಿನ ಹಿರಿಯ ನಿವೃತ್ತ ಶಿಕ್ಷಕರಾದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾಂತಾವರದ ಧರ್ಮರಾಜ್‌ ಕಂಬಳಿ, ಶ್ರೀ ದುರ್ಗಾ ಅನುದಾನಿತ ಪ್ರಾಥಮಿಕ ಶಾಲೆ ಜೋಡುರಸ್ತೆಯ ಕೆ.ಸಿ.ಲೂಕಸ್‌, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಂಜಾರೆಕಟ್ಟೆಯ ಶಾರದಾ ಬಿ, ಸರಕಾರಿ ಪ್ರಾಥಮಿಕ ಶಾಲೆ ಕಲ್ಲುಗುಪ್ಪೆಯ ಮುಖ್ಯ ಶಿಕ್ಷಕಿ ಸುಮಿತ್ರಾ ಜೈನ್‌, ಸರಕಾರಿ ಪ್ರಾಥಮಿಕ ಶಾಲೆ ಹೊಸ್ಮಾರಿನ ರೇವತಿ ಎನ್‌. ರಾಜ್‌ ಹಾಗೂ ಸರಕಾರಿ ಪ್ರಾಥಮಿಕ ಶಾಲೆ ನಂದಳಿಕೆಯ ಬೆನಿಟಾ ಫ್ಲಾವಿಯಾ ಪಿಂಟೋ ಇವರನ್ನು ಗುರುತಿಸಿ ಗೌರವಿಸಲಾಯಿತು.

ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಶಿಕ್ಷಕ ವೃತ್ತಿಯ ಆಯ್ಕೆ ಮತ್ತು ಕಣ್ಣೆದುರು ಬೆಳೆದ ವಿದ್ಯಾರ್ಥಿ ಮುಂದೊಂದು ದಿನ ಯಶಸ್ಸನ್ನು ಗುರುವಿನ ಮುಂದೆ ವ್ಯಕ್ತಪಡಿಸಿದಾಗ ಸಿಗುವ ಸಂತೋಷವೇ ಅತೀ ದೊಡ್ಡ ಸನ್ಮಾನ ಎಂದರು.

ಟ್ರಸ್ಟಿ ವಿದ್ಯಾ ಸುಧಾಕರ್‌ ಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಶಾಂತಿರಾಜ್‌ ಹೆಗ್ಡೆ, ಕಾರ್ಕಳ ಜ್ಞಾನಸುಧಾ ಪ.ಪೂ. ಕಾಲೇಜಿನ ಉಪ ಪ್ರಾಂಶುಪಾಲ ಸಾಹಿತ್ಯ, ಕಾರ್ಕಳ ಜ್ಞಾನಸುಧಾ ಆಂಗ್ಲಮಾದ್ಯಮ ಪ್ರೌಢಶಾಲಾ ಪ್ರಾಂಶುಪಾಲೆ ಉಷಾ ರಾವ್‌ ಯು, ಉಪಪ್ರಾಂಶುಪಾಲೆ ವಾಣಿ. ಕೆ ಉಪಸ್ಥಿತರಿದ್ದರು.

ಕಾರ್ಕಳ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ದಿನೇಶ್‌ ಎಂ. ಕೊಡವೂರ್ ಸ್ವಾಗತಿಸಿ, ಉಪನ್ಯಾಸಕಿ ಸಂಗೀತ ಕುಲಾಲ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...

ತುಳು ಭಾವಗೀತೆ ಸ್ಪರ್ಧೆ

ಉಡುಪಿ, ನ.24: ತುಳುಕೂಟ ಉಡುಪಿ (ರಿ,) ವತಿಯಿಂದ ದಿ. ನಿಟ್ಟೂರು ಸಂಜೀವ...

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...
error: Content is protected !!