ಬಂಟ್ವಾಳ: ಯುವಕ ಮಂಡಲ (ರಿ.) ಇರಾ ವತಿಯಿಂದ 49ನೇ ವರ್ಷದ ಕ್ರೀಡಾಕೂಟ ಇರಾ ಶಾಲಾ ಮೈದಾನದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಹಾಗೂ ತೀರ್ಪುಗಾರರಾಗಿ ಭಾಗವಹಿಸಿದ ಅಶೋಕ್ ನಾಯಕ್ ನಾಡಾಜೆ ಅವರು ಯುವಕ ಮಂಡಲದ ಕಾರ್ಯವನ್ನು ಶ್ಲಾಘಿಸಿದರು.
ಸಮಾರೋಪ ಸಮಾರಂಭದಲ್ಲಿ ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಜಯರಾಮ್ ಪೂಜಾರಿ, ಕಾರ್ಯದರ್ಶಿಗಳಾದ ಗಣೇಶ್ ಕೊಟ್ಟಾರಿ, ಇರಾ ಶ್ರೀ ಸೋಮನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಕುಂಡಾವು, ಇರಾ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಸೂರ್ಯಪ್ರಕಾಶ್ ರೈ, ಇರಾ ಗ್ರಾಮ ಪಂಚಾಯತ್ ಸದಸ್ಯರಾದ ಪ್ರತಾಪಚಂದ್ರ, ರಮೇಶ್ ಪೂಜಾರಿ, ಇರಾ ಶಾಲಾಭಿವೃದ್ದಿ ಸಮಿತಿಯ ಹಬೀಬ್ ರಹಿಮಾನ್, ಯುವಕ ಮಂಡಲದ ಅಧ್ಯಕ್ಷರಾದ ಅಶ್ವಿತ್ ಕೊಟ್ಟಾರಿ ಹಾಗೂ ಯುವಕ ಮಂಡಲದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಯುವಕ ಮಂಡಲದ ಸದಸ್ಯರಾದ ನಿತೇಶ್ ಶೆಟ್ಟಿ ಹಾಗೂ ವರದರಾಜ ಎಂ ಕಾರ್ಯಕ್ರಮ ನಿರೂಪಿಸಿದರು.