ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ಶ್ರೀ ಕೃಷ್ಣ ಮಠದ ಮುಂಭಾಗದಲ್ಲಿ ಲಾಂಛನ ಉಡುಪಿ,
ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಉಡುಪಿ ವಕೀಲರ ಸಂಘ (ರಿ.) ಉಡುಪಿ ಮತ್ತು ದೃಶ್ಯ ಕಲಾ ಸಾಂಸ್ಕೃತಿಕ ವೇದಿಕೆ ಉಡುಪಿ ಇವರುಗಳ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕದ 15 ಚಿತ್ರ ಕಲಾವಿದರುಗಳಿಂದ “ಶ್ರೀ ಕೃಷ್ಣಂ ವಂದೇ ಜಗದ್ಗುರುಂ- ದ ಸುಪ್ರೀಂ ಲೀಡರ್” ಎನ್ನುವ ವಿಷಯಕ್ಕೆ ಸಂಬಂಧಿಸಿ ಚಿತ್ರ ರಚನಾ ಪ್ರಾತ್ಯಕ್ಷಿಕೆಯನ್ನು ಶ್ರೀ ಕಾಣಿಯೂರು ಮಠದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಕ್ಯಾನ್ವಾಸ್ ಮೇಲೆ ಬಣ್ಣ ಹಾಕಿ ಚಿತ್ರ ಬಿಡಿಸುವುದರ ಮೂಲಕ ಉದ್ಘಾಟಿಸಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅನುಗ್ರಹ ಸಂದೇಶ ನೀಡಿದರು.
ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಾಂತವೀರ್ ಶಿವಪ್ಪರವರು, ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಉಡುಪಿ ವಕೀಲರ ಸಂಘ (ರಿ.) ಉಡುಪಿ ಇದರ ಅಧ್ಯಕ್ಷರಾದ ಬಿ. ನಾಗರಾಜ್, ಮಧುರಂ ವೆಜ್ ವೈಟ್ ಲೋಟಸ್ ಉಡುಪಿ ಇದರ ಮಾಲಕರಾದ ಅಜಯ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಕಲಾವಿದರು ಚಿತ್ರ ರಚನೆ ಮಾಡುವ ಸ್ಥಳಕ್ಕೆ ಬಂದು ಕಲಾವಿದರು ರಚಿಸಿದ ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಾಶೀರ್ವಾದ ವ್ಯಕ್ತಪಡಿಸಿದರು.
ಮೈಸೂರು, ಮಂಡ್ಯ, ಉಡುಪಿಯ 15 ಜನ ಕಲಾವಿದರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದೃಶ್ಯ ಕಲಾ ಸಾಂಸ್ಕೃತಿಕ ವೇದಿಕೆಯ ರಾಘವೇಂದ್ರ ಕೆ ಅಮೀನ್, ಲಾಂಛನ ಉಡುಪಿಯ ತೇಜಸ್ವಿ ಎಸ್ ಆಚಾರ್ಯ, ಅಜಯ್ ಬಿ. ರಾವ್, ನಿಶ್ಮಿತಾ ಸಿ. ಸನಿಲ್, ಚೇತನ್ ಐತಾಳ್ ಉಪಸ್ಥಿತರಿದ್ದರು, ಲಾಂಛನದ ಶಶಾಂಕ್ ಶಿವತ್ತಾಯ ಕಾರ್ಯಕ್ರಮ ನಿರ್ವಹಿಸಿದರು.