ಉಡುಪಿ: ಉಡುಪಿಯ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಲಯನ್ಸ್ ಮಣಿಪಾಲ ಇದರ ಅಧ್ಯಕ್ಷರಾದ ಕೆಪಿ ಸುರೇಶ್ ಪ್ರಭು ಉದ್ಘಾಟನೆ ನೆರವೇರಿಸಿದರು.
ಉದ್ಯೋಗ ಕ್ಷೇತ್ರಕ್ಕೆ ಮತ್ತು ಸಮಾಜದಲ್ಲಿ ಅತ್ಯವಶ್ಯಕವಾದ ವಿವಿಧ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸದವಕಾಶ ಮತ್ತು ಬುನಾದಿಯನ್ನು ಎನ್ಎಸ್ಎಸ್ ಚಟುವಟಿಕೆಗಳು ಒದಗಿಸುತ್ತಿವೆ. ಇಂಥಹ ಅವಕಾಶಗಳನ್ನು ಈ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರುದ್ರೇಗೌಡ ವಹಿಸಿದ್ದರು. ಕಾಲೇಜಿನ ಎನ್ಎಸ್ಎಸ್ ಘಟಕದ ಕಾರ್ಯಕ್ರಮಾಧಿಕಾರಿಯಾದ ಗಿರಿಜಾ ಹೆಗಡೆ ಗಾಂವ್ಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸರಿತಾ, ರಮೇಶ್ ಕಿಣಿ, ಘಟಕದ ವಿದ್ಯಾರ್ಥಿ ನಾಯಕಿ ಪೃಥ್ವಿ ಖಾರ್ವಿ ಉಪಸ್ಥಿತರಿದ್ದರು.
ಸುಧಾ ಹೆಗಡೆ ಸ್ವಾಗತಿಸಿ, ದಯಾನಂದ ವಂದಿಸಿದರು. ಪ್ರಕಾಶ್ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿ ಕಾರ್ಯಕ್ರಮ ನಿರೂಪಿಸಿದರು.