ಗಂಗೊಳ್ಳಿ: ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ, ಅಮೃತ ಯುವತಿ ಮಂಡಲ, ಅರ್ಚನ ಮಹಿಳಾ ಮಂಡಲ, ರೋಟರಿ ಕ್ಲಬ್ ಗಂಗೊಳ್ಳಿ ಮತ್ತು ಪಂಚಗಂಗಾವಳಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ 10ನೇ ವರ್ಷದ ಮುದ್ದುಕೃಷ್ಣ ವೇಷ ಸ್ಪರ್ಧೆಯು 21.08.2022 ರಂದು ಡಾ. ಅಂಬೇಡ್ಕರ್ ಭವನ ಮೇಲ್ ಗಂಗೊಳ್ಳಿ ಇಲ್ಲಿ ಮಧ್ಯಾಹ್ನ ನಡೆಯಲಿದೆ.
ರೋಟರಿ ಕ್ಲಬ್ ಅಧ್ಯಕ್ಷ ಸುಗುಣ ಆರ್ ಕೆ, ಸುಧಾಕರ ಆಚಾರ್ಯ, ರಾಜು ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಸ್ಥಳದಲ್ಲಿಯೇ ಸ್ಪರ್ಧಾಳುಗಳು ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 7406196138, 9535633230, 9481751521 ನಂಬರನ್ನು ಸಂಪರ್ಕಿಸಲು ಕೋರಲಾಗಿದೆ.