ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಕೃಷ್ಣಾಪುರ ಮಠ ಉಡುಪಿ ಆಶ್ರಯದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್(ರಿ.) ಉಡುಪಿ ವಲಯದ ನೇತೃತ್ವದಲ್ಲಿ ಪಂಚಮಿ ಟ್ರಸ್ಟ್ (ರಿ.), ಗಾಂಧಿ ಹಾಸ್ಪಿಟಲ್ ಸಹಯೋಗದೊಂದಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಉಡುಪಿಯಲ್ಲಿ ಪ್ರಥಮ ಬಾರಿಗೆ ಉಡುಪಿಯ ರಥಬೀದಿಯಲ್ಲಿರುವ ಕನಕ ಗೋಪುರ ತಿರಂಗ ಬಣ್ಣದ ಬೆಳಕಿನೊಂದಿಗೆ ಕಂಗೊಳಿಸಲಿದೆ.
ಇದರ ಉದ್ಘಾಟನಾ ಕಾರ್ಯಕ್ರಮ ಆಗಸ್ಟ್ 13 ಶನಿವಾರ, ಸಂಜೆ ಗಂಟೆ 6.00ಕ್ಕೆ- ಕನಕ ಗೋಪುರದ ಎದುರು ನಡೆಯಲಿದೆ.
ಅಂದು ಸಂಜೆ 6.30 -10.00 ಗಂಟೆಯವರೆಗೆ, ಆಗಸ್ಟ್ 14 ಭಾನುವಾರ ಸಂಜೆ 6.30 ರಿಂದ ರಾತ್ರಿ 1.00 ಗಂಟೆಯವರೆಗೆ, ಆಗಸ್ಟ್ 15 ಸೋಮವಾರ ಸಂಜೆ 6.30 ರಿಂದ 10.00 ಗಂಟೆಯವರೆಗೆ ತ್ರಿವರ್ಣ ಬೆಳಕಿನ ದೀಪಗಳು ಬೆಳಗಲಿವೆ.
ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಕೃಷ್ಣಾಪುರ ಮಠ ಉಡುಪಿ ಚಾಲನೆ ನೀಡಲಿದ್ದಾರೆ.
ಶಾಸಕ ಕೆ. ರಘುಪತಿ ಭಟ್, ಜನಾರ್ದನ್ ಕೊಡವೂರು, ಅಧ್ಯಕ್ಷರು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್(ರಿ.) ಉಡುಪಿ ವಲಯ, ಡಾ. ಎಂ. ಹರಿಶ್ಚಂದ್ರ, ಎಂ.ಡಿ, ಗಾಂಧಿ ಆಸ್ಪತ್ರೆ, ಉಡುಪಿ, ವಿಜಯ ಕೊಡವೂರು, ನಗರಸಭಾ ಸದಸ್ಯರು, ಕೆ. ವಾಸುದೇವ ರಾವ್, ಅಧ್ಯಕ್ಷರು, ಎಸ್ಕೆಪಿಎ ವಿವಿದ್ದೋದ್ದೇಶ ಸಹಕಾರಿ ಸಂಘ ನಿ., ಬಾಲಕೃಷ್ಣ ಮದ್ದೋಡಿ, ಅಧ್ಯಕ್ಷರು, ರೋಟರಿ ಉಡುಪಿ ರಾಯಲ್, ರವಿರಾಜ್ ಹೆಚ್.ಪಿ, ಅಧ್ಯಕ್ಷರು, ಕಸಾಪ, ಉಡುಪಿ ತಾಲೂಕು ಘಟಕ, ಜಯಕರ ಸುವರ್ಣ, ಗೌರವಾಧ್ಯಕ್ಷರು, ಎಸ್ಕೆಪಿಎ ಉಡುಪಿ ವಲಯ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ನಿವೃತ್ತ ಯೋಧರಾದ ಕೃಷ್ಣ ಶೆಟ್ಟಿಬೆಟ್ಟು ಇವರಿಗೆ ಗೌರವ ಅಭಿನಂದನೆ ನಡೆಯಲಿದೆ. ಪ್ರಭಾಕರ ಸೌಂಡ್ಸಿಸ್ಟಿಮ್, ಕೆ.ಎಂ.ಮಾರ್ಗ ಉಡುಪಿ, ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ರೋಟರಿ ಉಡುಪಿ ರಾಯಲ್, ಉಡುಪ ರತ್ನ ಪ್ರತಿಷ್ಠಾನ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಸಹಕರಿಸಲಿದ್ದಾರೆ ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್(ರಿ.) ಉಡುಪಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.