ಕಾರ್ಕಳ: ಕಾರ್ಕಳದ ಆರ್.ಗೌತಮ್ ಶೆಣೈರವರು ಚೆನ್ನೈನ ಪ್ರತಿಷ್ಠಿತ ಗಣಿತಶಾಸ್ತ್ರ ಸಂಶೋಧನಾ ಕೇಂದ್ರದ ಡೈರೆಕ್ಟರ್ ಡಾ. ಮಾಧವನ್ ಮುಕುಂದ್ ಮತ್ತು ಪ್ರೊ.ಎಸ್.ಪಿ. ಸುರೇಶ್ರವರ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ‘ಆನ್ ಎಫೆಕ್ಟಿವ್ ವೆರಿಫಿಕೇಶನ್ ಆಫ್ ರೆಪ್ಲಿಕೇಟೆಡ್ ಡೇಟಾ ಟೈಪ್ಸ್ʼ ಎಂಬ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.
ಇದೇ ಕೇಂದ್ರದಿಂದ 2012 ರಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಎಂ.ಎಸ್ಸಿ. ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದರು. ಕಾರ್ಕಳದ ವೈದ್ಯರಾದ ಡಾ. ಆರ್.ಗಿರೀಶ್ ಶೈಣೈ ಹಾಗೂ ಆರ್. ನಿರ್ಮಲಾ ಶೆಣೈ ದಂಪತಿಗಳ ಪುತ್ರರಾಗಿದ್ದು, ತನ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಜೆಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿಯೂ, ಪಿ.ಯು. ಶಿಕ್ಷಣವನ್ನು ನಿಟ್ಟೆಯ ಎನ್.ಎಸ್.ಎ.ಎಮ್. ಕಾಲೇಜಿನಲ್ಲಿ ಪೂರೈಸಿ 2002 ರಲ್ಲಿ ಸಿ.ಇ.ಟಿ.ಯಲ್ಲಿ ರಾಜ್ಯಕ್ಕೆ 27 ನೇ ರ್ಯಾಂಕ್ ಗಳಿಸಿದ್ದರು. ಇವರು ಎನ್.ಐ.ಟಿ.ಕೆ ಸುರತ್ಕಲ್ನಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಇ ಪದವಿಯನ್ನು ಗಳಿಸಿ, ಐಬಿಎಂ ಸಂಸ್ಥೆಯ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿದ್ದರು.