ಉಡುಪಿ: ಇಂಸೊಲ್ವೆನ್ಸಿ ಮತ್ತು ಬ್ಯಾಂಕ್ರಾಫ್ಟ್ಸಿ ಬೋರ್ಡ್ ಆಫ್ ಇಂಡಿಯಾ ನಡೆಸುವ ಪ್ರತಿಷ್ಠಿತ ಐ.ಬಿ.ಬಿ.ಐ 2022 ರ ಪರೀಕ್ಷೆಯಲ್ಲಿ ಅವಿನಾಶ್ ನಾಯಕ್ ಹಿರಿಯಡ್ಕ ಇವರು ತೇರ್ಗಡೆ ಹೊಂದಿರುತ್ತಾರೆ. ಈ ಪರೀಕ್ಷೆಯಲ್ಲಿ ಇಲ್ಲಿಯವರೆಗೆ ಉಡುಪಿ ಜಿಲ್ಲೆಯಿಂದ ಒಬ್ಬರು ಮಾತ್ರ ತೇರ್ಗಡೆ ಹೊಂದಿದ್ದು ಅವಿನಾಶ್ ಎರಡನೆಯವರಾಗಿದ್ದಾರೆ.
ತನ್ಮೂಲಕ ರಿಜಿಸ್ಟರ್ಡ್ ವಾಲ್ಯೂವರ್ ಆಗಿ ವಾಣಿಜ್ಯ ಬ್ಯಾಂಕ್ ಗಳಲ್ಲಿ ಮತ್ತು ಕಂಪೆನಿಗಳಲ್ಲಿ ಮೌಲ್ಯಮಾಪನ ಮಾಡಲು ಅರ್ಹತೆ ಹೊಂದಿರುತ್ತಾರೆ. ಇವರು ಮಣಿಪಾಲ ಎಂ.ಐ.ಟಿ ಯಲ್ಲಿ ಎಂ.ಟೆಕ್ ಹಾಗೂ ಅಣ್ಣಾಮಲೈ ವಿಶ್ವವಿದ್ಯಾಲಯದ ಎಂ.ಎಸ್.ಸಿ ಪದವಿ ಹೊಂದಿದ್ದು ವಿವಿಧ ವಾಣಿಜ್ಯ ಸಂಸ್ಥೆಗಳಲ್ಲಿ ವಾಲ್ಯೂವರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸದಾನಂದ ನಾಯಕ್ ಮತ್ತು ಶೋಭಾ ಎಸ್ ನಾಯಕ್ ಹಿರಿಯಡ್ಕ ಇವರ ಪುತ್ರ.