ಕಾರ್ಕಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಡೆಸುವ ರಾಷ್ಟ್ರಮಟ್ಟದ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನಾ (ಕೆವಿಪಿವೈ) ಪರೀಕ್ಷೆಯ ಪರಿಷ್ಕೃತ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ 18 ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ ರ‍್ಯಾಂಕ್ ಗಳಿಸಿದ್ದಾರೆ.
ಸಂಸ್ಥೆಯ ಆರ್ಯ ಪಿ ಶೆಟ್ಟಿ 736ನೇ ರ‍್ಯಾಂಕ್, ಪ್ರಜ್ವಲ್ ಪಟಗಾರ್ 820ನೇ ರ‍್ಯಾಂಕ್, ಅಖಿಲ್ ವಾಗ್ಲೆ 1232ನೇ ರ‍್ಯಾಂಕ್, ಆರ್ಯನ್ ವಿದ್ಯಾಧರ್ ಶೆಟ್ಟಿ 1431ನೇ ರ‍್ಯಾಂಕ್, ಕಾರ್ತಿಕ್ ಬ್ಯಾಕೊಡ್ 1745ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಜೊತೆಗೆ ಶಬರಿ ಎನ್.ಶೆಟ್ಟಿ, ಸಾಗರ್ ಎಚ್.ಪಿ, ಸೃಜನ್ ಶೆಟ್ಟಿ ಮಾರ್ಡಿ, ಚಿಂತನ್ ಪಿ, ಪ್ರತೀಕ್ ಕುಮಾರ್, ದಿಯಾ ಯು ಶೆಟ್ಟಿ, ಶಶಾಂಕ್ ಕಲ್ಕುರ, ಉತ್ತಮ್, ಚಿರಾಗ್ ಎಸ್, ಆರ್ಯ ಬಿ ಯಡಿಯಾಳ, ಯುವಾನ್, ದೀಕ್ಷತಾ ಆರ್, ಆದಿತ್ಯ ಟಿ.ಡಿ ಸಹಿತ, ಕೆವಿಪಿವೈ ಎಸ್‌ಎಯಲ್ಲಿ ಶ್ರೀವರ್ಧನ್ ಶೆಣೈ ರ‍್ಯಾಂಕ್ ಪಡೆದ ವಿದ್ಯಾರ್ಥಿಯಾಗಿದ್ದಾರೆ.
ಇವರೆಲ್ಲರ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿರುತ್ತಾರೆ.