ಉಡುಪಿ: 62ನೇ ವಾರ್ಷಿಕ ಮಹಾಸಭೆಯಲ್ಲಿ ಹಿಂದೀ ಪ್ರಚಾರ ಸಮಿತಿ ಉಡುಪಿಯ 2022-2023ನೇ ಸಾಲಿನ ಅಧ್ಯಕ್ಷರಾಗಿ ಲೆಕ್ಕ ಪರಿಶೋಧಕ ಮತ್ತು ಸಂಪನ್ಮೂಲ ವ್ಯಕ್ತಿಯಾಗಿರುವ ಗುಜ್ಜಾಡಿ ಪ್ರಭಾಕರ ನಾಯಕ್ ಅವರು ಪುನರಾಯ್ಕೆ ಆಗಿದ್ದಾರೆ.
ಉಪಾಧ್ಯಕ್ಷರಾಗಿ ವಕೀಲರಾದ ಹೆಚ್. ಜಯಪ್ರಕಾಶ ಕೆದ್ಲಾಯ ಮತ್ತು ವರಿಷ್ಠ ಹಿಂದೀ ಪ್ರಚಾರಕರಾದ ಯು.ಎಸ್. ರಾಜಗೋಪಾಲ ಆಚಾರ್ಯ, ಕಾರ್ಯದರ್ಶಿಯಾಗಿ ವರಿಷ್ಠ ಹಿಂದೀ ಪ್ರಚಾರಕಿ ಯು. ಶಕುಂತಲಾ ಶೇಟ್, ಜತೆ ಕಾರ್ಯದರ್ಶಿಯಾಗಿ ತೆರಿಗೆ ಸಲಹೆಗಾರರಾದ ಧೀರೇಂದ್ರ ನಾವೇಲ್ಕರ್ ಮತ್ತು ಕೋಶಾಧಿಕಾರಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಮುಕ್ತಾ ಶೆಣೈ ಚುನಾಯಿತರಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಲ್ತಾಫ್ ಅಹಮದ್, ಜಯವಂತ ಕಾಮತ್, ಮಧುಕೇಶ್ವರ ಪಿ. ಹೆಗ್ಡೆ, ರಘುಪತಿ ಪಿ. ಹೆಚ್ ಮತ್ತು ಜೇನ್ ಅಸುಂತಾ ಪಿರೈರಾ ಆಯ್ಕೆಯಾದರು.