ಕುಂದಾಪುರ: ಇಲ್ಲಿನ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರಿಗಾಗಿ ಹಮ್ಮಿಕೊಂಡಿರುವ ‘ಪ್ರೇರಣಾ 2022’ ಪುನಶ್ಚೇತನ ಸರಣಿ ಕಾರ್ಯಾಗಾರದ ಮುಂದುವರಿದ ಭಾಗದಲ್ಲಿ ಗ್ರ್ಯಾವಿಟಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕುಂದಗನ್ನಡದ ರಾಯಭಾರಿ ಮನು ಹಂದಾಡಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.
ಕುಂದಗನ್ನಡದ ಸೊಗಡನ್ನು ಪ್ರತಿಬಿಂಬಿಸುವ ಕುಂದಾಪುರ ಕನ್ನಡ ಭಾಷೆಯ ಹುಟ್ಟು, ಬೆಳವಣಿಗೆಯನ್ನು ಕುರಿತು ತಮ್ಮ ವಿಭಿನ್ನ ಶೈಲಿಯ ಮಾತು ಹಾಗೂ ನಗೆ ಚಟಾಕಿಯ ಮೂಲಕ ಕಾರ್ಯಕ್ರಮದ ಮೆರುಗನ್ನು ಇಮ್ಮಡಿಗೊಳಿಸಿದರು. ಕುಂದಗನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ಹಂದಾಡಿ ಅವರ ಪ್ರೀತಿ, ಅಭಿಮಾನ ಮತ್ತು ಸಾಧನೆಯನ್ನು ಗುರುತಿಸಿ ಸಂಸ್ಥೆಯ ಪರವಾಗಿ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಪ್ರಾಂಶುಪಾಲೆ ಚಿಂತನಾ ರಾಜೇಶ್, ಉಪ ಪ್ರಾಂಶುಪಾಲೆ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶುಭಾ ಕೆ ಎನ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಸಹಾಯಕ ಮುಖ್ಯ ಶಿಕ್ಷಕಿ ಕವಿತಾ ಭಟ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಲತಾ ಜಿ ಭಟ್, ಸಂಯೋಜಕ ಶಿಕ್ಷಕಿ ಆರತಿ ಶೆಟ್ಟಿ, ಪ್ರೌಢಶಾಲಾ ಸಹಾಯಕ ಮುಖ್ಯ ಶಿಕ್ಷಕ ಚಂದ್ರಶೇಖರ್ ಶೆಟ್ಟಿ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿ ದಿವ್ಯ ಎಚ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.