ಉಡುಪಿ: ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ ಇದರ ವತಿಯಿಂದ ಹಳೆ ಅಂಚೆ ಕಚೇರಿ ರಸ್ತೆ ಬಳಿ ನೂತನವಾಗಿ ಪ್ರಾರಂಭಿಸಲಾದ ಫಿಸಿಯೋಕೇರ್ ಕೇಂದ್ರದ ಉದ್ಘಾಟನೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಉಡುಪಿ ಅಧ್ಯಕ್ಷರು ಹಾಗೂ ಉದ್ಯಮಿ ಪುರುಷೋತ್ತಮ ಶೆಟ್ಟಿ, ಎ.ವಿ ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ.ವಿ ಭಂಡಾರಿ, ಭಾರತೀಯ ವೈದ್ಯ ಸಂಘ ಉಡುಪಿ ಕರಾವಳಿ ಅಧ್ಯಕ್ಷ ಡಾ. ಕಲ್ಯ ವಿನಾಯಕ ಶೆಣೈ, ಎ.ಫ್.ಐ ಉಡುಪಿ ಜಿಲ್ಲಾಧ್ಯಕ್ಷ ಡಾ. ಎನ್.ಟಿ ಅಂಚನ್, ಬಡಗುಬೆಟ್ಟು ಕ್ರೆಡಿಟ್ ಕೋ. ಅಪರೇಟಿವ್ ಜಿ.ಎಂ ಜಯಕರ ಶೆಟ್ಟಿ ಇಂದ್ರಾಳಿ, ನಗರಸಭಾ ಸದಸ್ಯೆ ಮಾನಸ ಪೈ, ಕೆ.ಎಂ.ಸಿ ಫಿಸಿಯೋಥೆರಪಿ ವಿಭಾಗದ ಪ್ರಾದ್ಯಾಪಕಿ ಡಾ. ಭಾಮಿನಿ ಕೃಷ್ಣ ರಾವ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಸುವರ್ಣ ಎಂಟರ್ಪ್ರೈಸಸ್ ಮುಖ್ಯಸ್ಥ ಮಧುಸೂಧನ್ ಹೇರೂರು, ಉದ್ಯಮಿ ಎ. ಶಶಿಧರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಹಾರಾಡಿ ಎ.ವಿ ಬಾಳಿಗಾ ಡಯಾಲಿಸಿಸ್ ಕೇಂದ್ರಕ್ಕೆ ರೋಟರಿ ಬ್ರಹ್ಮಾವರದ ಮೂಲಕ ಕೊಡಮಾಡಿದ ಐ.ಸಿ.ಯು ಬೆಡ್ ಗಳನ್ನು ಹಸ್ತಾಂತರಿಸಲಾಯಿತು.
ಗಿರಿಜಾ ಗ್ರೂಪ್ ನ ಮುಖ್ಯಸ್ಥರಾದ ರವೀಂದ್ರ ಶೆಟ್ಟಿ ಸ್ವಾಗತಿಸಿದರು. ಕೇಂದ್ರದ ಫಿಸಿಯೋಥೆರಪಿ ವಿಭಾಗದ ಮುಖ್ಯಸ್ಥರಾದ ಡಾ. ದೀಪಾ ನಾಯಕ್ ಪ್ರಸ್ತಾವನೆಗೈದು ಸಂಸ್ಥೆಯ ವಿಶೇಷತೆ ಬಗ್ಗೆ ತಿಳಿಸಿದರು. ಅನಂತ್ ನಾಯಕ್, ಆನಂದ ನಾಯಕ್ ಪ್ರಾರ್ಥಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.