ಬ್ರಹ್ಮಾವರ: ಉಡುಪಿಯ ಯುವ ವಕೀಲರಾದ ಮಹಮ್ಮದ್ ಸುಹಾನ್ ಇವರ ಶಾಖಾ ಕಚೇರಿಯನ್ನು ಇಂದು ಬ್ರಹ್ಮಾವರದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಡುಪಿಯ ಹಿರಿಯ ವಕೀಲರಾದ ಅಲೆವೂರು ಮಾಧವ ಆಚಾರ್, ವಕೀಲರ ಸಂಘದ ಅಧ್ಯಕ್ಷರಾದ ನಾಗರಾಜ್ ಬಿ., ವಕೀಲರ ಸಂಘದ ಕಾರ್ಯದರ್ಶಿಯಾದ ರೊನಾಲ್ಡ್ ಪ್ರವೀಣ್ ಕುಮಾರ್, ಹಿರಿಯ ವಕೀಲರಾದ ವಿಜಯ್ ಸಿ ಹೆಗ್ಡೆ, ಬ್ರಹ್ಮಾವರದ ಯುವ ನಾಯಕರದ ಭಿರ್ತಿ ರಾಜೇಶ್ ಶೆಟ್ಟಿ, ವಕೀಲರಾದ ವಿನಯ್ ಆಚಾರ್ಯ, ರಮೇಶ್ ಶೆಟ್ಟಿ, ಅಮ್ರಿನ್, ರಾಘವೇಂದ್ರ, ಎಹೆತಿಶಾಮ್, ಸುವನಿತ, ನವಿನ್ ಕೆ. ಶೆಟ್ಟಿಬೆಟ್ಟು, ವಿಜಯ್ ಭಟ್ ಕಡೆಕಾರು, ಸಂತೋಷ್ ಕುಮಾರ್, ಧನಂಜಯ್ ರಾಯಲಕೇರಿ ಮುಂತಾದವರು ಉಪಸ್ಥಿತರಿದ್ದರು.