ಮಂಗಳೂರು: ಸಿಒಡಿಪಿ (ರಿ) ಮಂಗಳೂರು ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣೆ ಕಾರ‍್ಯಕ್ರಮ ಸಿಒಡಿಪಿ ಸಭಾಂಗಣದಲ್ಲಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಪೂಜ್ಯ ಮ್ಯಾಕ್ಸಿಮ್ ನೊರೊನ್ಹಾರವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ವರ್ಷದಲ್ಲಿ ಸಿಒಡಿಪಿ ಸಂಸ್ಥೆಯಿಂದ 97 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ದೊರಕಿದ್ದು, ನೆರವು ಸ್ವೀಕರಿಸಿದಲ್ಲಿ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿದ್ದರು.
ಸಿಒಡಿಪಿ ಸಂಸ್ಥೆಯ ಮುಖಾಂತರ ಪ್ರತಿವರ್ಷ ಬಡ ವಿದ್ಯಾರ್ಥಿಗಳಿಗೆ ನೆರವು ದೊರೆಯಿತ್ತಿದ್ದು, ಈ ವರ್ಷ ಕೂಡ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಸಹಾಯ ಹಸ್ತವನ್ನು ನೀಡುತ್ತಿದೆ. ನಾವೆಲ್ಲರೂ ಹಂಚಿಕೊಳ್ಳುವ ಮಾನೋಭಾವ ಬೆಳೆಸಬೇಕೆಂದು ಫಾ| ಮ್ಯಾಕ್ಸಿಮ್ ನೊರೊನ್ಹಾ ಕರೆ ನೀಡಿದರು.
ಸಿಒಡಿಪಿ ನಿರ್ದೇಶಕ ಫಾ| ವಿನ್ಸೆಂಟ್ ಡಿ ಸೋಜ ಸ್ವಾಗತಿಸಿ ಸರ್ಕಾರದಿಂದ ಲಭಿಸುವ ಸವಲತ್ತುಗಳನ್ನು ಪಡೆಯುವ ಬಗ್ಗೆ ಸವಿಸ್ತರವಾಗಿ ಮಾಹಿತಿಯನ್ನು ನೀಡಿದರು. ಸಿಒಡಿಪಿ ಸಂಸ್ಥೆಯ ಯೋಜನಾಧಿಕಾರಿ ಲೆನೆಟ್‌ರವರು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಬಗ್ಗೆ ಮಾಹಿತಿಯನ್ನು ನೀಡಿದರು.
ಎಡುಕ್ಯೇರ್ ಟ್ರಸ್ಟ್ನ ಸಂಯೋಜಕ ಸ್ಟೀವನ್ ಪಿಂಟೊ ಹಾಗೂ ವಿದ್ಯಾರ್ಥಿಗಳ ಹೆತ್ತವರು ಭಾಗವಹಿಸಿದ್ದರು. ಫಾ| ವಿನ್ಸೆಂಟ್ ಡಿ ಸೋಜರವರು ಕಾರ‍್ಯಕ್ರಮ ನಿರೂಪಿಸಿದರು.