Thursday, November 14, 2024
Thursday, November 14, 2024

ಗುರುನಮನ ಕಾರ್ಯಕ್ರಮ ಸಮಾಜಕ್ಕೆ ಉತ್ತಮ ಸಂದೇಶ: ಶಾಸಕ ಕಾಮತ್

ಗುರುನಮನ ಕಾರ್ಯಕ್ರಮ ಸಮಾಜಕ್ಕೆ ಉತ್ತಮ ಸಂದೇಶ: ಶಾಸಕ ಕಾಮತ್

Date:

ಮಂಗಳೂರು: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಶಿಕ್ಷಕರನ್ನು ಗುರುತಿಸಿ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಇತರ ಶಿಕ್ಷಣ ಸಂಸ್ಥೆಗಳಿಗೆ ಮೇಲ್ಪಂಕ್ತಿ.

ಮುಂದಿನ ದಿನಗಳಲ್ಲಿ ಕೆನರಾ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಮಾದರಿ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುವಂತಾಗಲಿ ಎಂದು ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ಹೇಳಿದರು.

ಕೆನರಾ ಹೈಸ್ಕೂಲ್ ಅಸೋಸಿಯೇಶನ್ ವತಿಯಿಂದ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಹಾಗೂ ಶಿಕ್ಷಕೇತರರಿಗೆ ಗುರುನಮನ ಸಲ್ಲಿಸುವ ಸಮಾರಂಭವನ್ನು ಭಾನುವಾರ ನಗರದ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಅಮ್ಮೆಂಬಳ ಸುಬ್ಬರಾಯ ಪೈ ಅವರು 132 ವರ್ಷಗಳ ಹಿಂದೆ ಆರಂಭಿಸಿದ ಸಂಸ್ಥೆ ಬೃಹತ್ ಮಟ್ಟಕ್ಕೆ ಬೆಳೆದಿದೆ.

ತಾನು ಕೂಡ ಕಾಲೇಜು ವಿದ್ಯಾಭ್ಯಾಸವನ್ನು ಕೆನರಾದಲ್ಲಿ ಕಲಿತಿದ್ದು, ಶಾಸಕನಾಗಿ ಸೇವೆ ಮಾಡಲು ಆವತ್ತು ಕಲಿಸಿದ ಗುರುಗಳ ಸೂಕ್ತ ಮಾರ್ಗದರ್ಶನವೇ ಕಾರಣ. ಇಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಅನೇಕರು ಸಾಧನೆಯ ಶಿಖರ ಏರಿರುವುದು ಕೆನರಾ ಸಂಸ್ಥೆಗಳ ಹಿರಿಮೆ ಸಾರುತ್ತದೆ ಎಂದು ಅವರು ಹೇಳಿದರು.

ಸುಮಾರು 135 ಶಿಕ್ಷಕರು ಹಾಗೂ ಶಿಕ್ಷಕೇತರರನ್ನು ಕೆನರಾ ಬೆಳ್ಳಿ ಲಾಂಛನದ ಸ್ಮರಣಿಕೆಯನ್ನು ವಿಶೇಷವಾಗಿ ನೀಡಿ ಸನ್ಮಾನಿಸಲಾಯಿತು.

ಶಿಕ್ಷಕರು ತಮ್ಮ ಅನುಭವ ಹಂಚಿಕೊಂಡರು. ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ನೆಚ್ಚಿನ ಶಿಕ್ಷಕರೊಂದಿಗೆ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು.

ಸನ್ಮಾನಿತರೊಂದಿಗೆ ಹಳೆ ವಿದ್ಯಾರ್ಥಿಗಳು ಸಹಭೋಜನ ಮಾಡಿದರು.

ಖ್ಯಾತ ವೈದ್ಯ ಡಾ. ನರಸಿಂಹ ಪೈ ಅವರು ಕೆನರಾ ಶಿಕ್ಷಣ ಸಂಸ್ಥೆಯೊಂದಿಗೆ ತಮ್ಮ ಬಾಂಧವ್ಯವನ್ನು ಸ್ಮರಿಸಿಕೊಂಡರು.

ಗೌರವ ಕಾರ್ಯದರ್ಶಿ ಎಂ ರಂಗನಾಥ ಭಟ್ ಪ್ರಾಸ್ತವಿಕವಾಗಿ ಮಾತನಾಡಿದರು.

ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಪದಾಧಿಕಾರಿಗಳಾದ ಸಿಎ ಎಂ ವಾಮನ ಕಾಮತ್, ಸಿಎ ಎಂ ಜಗನ್ನಾಥ್ ಕಾಮತ್, ಕೆ. ಸುರೇಶ್ ಕಾಮತ್, ಟಿ. ಗೋಪಾಲಕೃಷ್ಣ ಶೆಣೈ, ಪಿ. ಗೋಪಾಲಕೃಷ್ಣ ಶೆಣೈ, ಕೆ. ಸುಧಾಕರ ಪೈ, ಬಸ್ತಿ ಪುರುಷೋತ್ತಮ ಶೆಣೈ, ಎಂ. ನರೇಶ್ ಶೆಣೈ, ಡಿ. ವಾಸುದೇವ ಕಾಮತ್, ಕೆ. ಶಿವಾನಂದ ಶೆಣೈ, ಪಿ.ಆರ್.ಒ ಉಜ್ವಲಾ ಮಲ್ಯ, ರಿಜಿಸ್ಟ್ರಾರ್ ಗುರುದತ್ತ ಭಾಗವತ್ ಹಾಗೂ ಗಣ್ಯರು ಉಪಸ್ಥಿತರಿದ್ದರು.

ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಗೋಪಾಲಕೃಷ್ಣ ಭಟ್ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ ಸಂಭ್ರಮ

ಉಡುಪಿ, ನ.13: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಪರ್ಯಾಯ...

ಮೀನುಗಾರರಿಗೆ ಎನ್.ಎಫ್.ಡಿ.ಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಉಡುಪಿ, ನ.13: ಅಸಂಘಟಿತ ವಲಯವಾದ ಮೀನುಗಾರಿಕೆ ವಲಯವನ್ನು ಸಂಘಟಿತ ವಲಯವಾಗಿ ರೂಪಿಸುವ...

ಆಳ್ವಾಸ್ ವಿರಾಸತ್-2024: ಮಳಿಗೆ ತೆರೆಯಲು ಆಹ್ವಾನ

ಮೂಡುಬಿದಿರೆ, ನ.13: ಇದೇ ಬರುವ ಡಿಸೆಂಬರ್ 10 ಮಂಗಳವಾರದಿಂದ 15ನೇ ಭಾನುವಾರದವರೆಗೆ...

ಜ್ಞಾನಸುಧಾ: ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಉಡುಪಿ, ನ.13: ರಾಷ್ಟ್ರದಾದ್ಯಂತ ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳನ್ನು ಗ್ರಾಮೀಣ ಬದುಕಿಗೆ ಬೆಸೆಯುವ...
error: Content is protected !!