ಮಂಗಳೂರು: ಜಿಲ್ಲೆಗಳಲ್ಲಿ ನಡೆದ ಪೂರಕ ಕಾನೂನು ಚಟುವಟಿಕೆಗಳ ಸಾಧನೆಗಳ ಗುರುತಿಸುವಿಕೆ, ಜಿಲ್ಲಾ ಸುಗಮಕಾರರ ಸಮುಚ್ಚಯಗಳ ಬಲವರ್ಧನೆಯ ಯೋಜನೆ, ರಾಜ್ಯ ಸಮುಚ್ಚಯದ ಸಭೆ ನಡೆಸುವ ಉದ್ದೇಶದೊಂದಿಗೆ ಜಿಲ್ಲಾ ಪ್ರತಿನಿಧಿಗಳ ಸಮಾವೇಶವು ಮಂಗಳೂರಿನ ನಂತೂರುಪದವು ಬಳಿಯ ಐ.ಎಸ್.ಡಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ಷೇತ್ರದ ಜಿಲ್ಲೆಗಳಲ್ಲಿ ನಡೆದ ಪೂರಕ ಕಾನೂನು ಕಾರ್ಯಕ್ರಮದಿಂದಾದ ಜನರಲ್ಲಿ ಬದಲಾವಣೆಗಳನ್ನು ಗುರುತಿಸುತ್ತಾ, ಪೂರಕ ಕಾನೂನು ಕಾರ್ಯಕ್ರಮವನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ಸಲಹೆಗಳನ್ನು ಗುರುತಿಸಲಾಯಿತು.
ಮಹಿಳೆಯರು ಅವರಲ್ಲಿ, ಅವರ ಮನೆಗಳಲ್ಲಿ ಹೆಣ್ನು ಗಂಡು ಸಮಾನತೆಯನ್ನು ತರಲು ಪ್ರಯತ್ನಿಸುತ್ತಿರುವುದು, ಮಹಿಳಾ ಕಾನೂನುಗಳನ್ನು ತಿಳಿದುಕೊಳ್ಲುತ್ತಾ ತೊಂದರೆಯಲ್ಲಿರುವ ಮಹಿಳೆಯರಿಗೆ ಸಹಾಯ ಮಾಡುತ್ತಿರುವುದು ಇತ್ಯಾದಿ. ಮುಂದೆ ಜಿಲ್ಲೆಗಳಲ್ಲಿ ನಡೆಸುವ ಚಟುವಟಿಕೆಗಳನ್ನು ಗುರುತಿಸಲಾಯಿತು. ತಾಲೂಕು ಮಟ್ಟದಲ್ಲಿ ಪೂರಕ ಕಾನೂನು ಕಾರ್ಯಕ್ರಮ ಮೂಲಕ ಸುಗಮಕಾರರ ತಂಡ ರಚಿಸುವುದು, ಕಾನೂನು ಮಾಹಿತಿಯನ್ನು ನೀಡುವುದು, ಮಕ್ಕಳಿಗೆ ಅರಿವಿನ ಕಾರ್ಯಕ್ರಮಗಳನ್ನು ನಡೆಸುವುದು ಇತ್ಯಾದಿ. ಜತೆಗೆ ಜಿಲ್ಲಾ ಸಮುಚ್ಚಯವನ್ನು ಮತ್ತು ರಾಜ್ಯ ಸಮುಚ್ಚಯವನ್ನು ಬಲಗೊಳಿಸುವ ಬಗ್ಗೆ ಚರ್ಚಿಸಿ ಯೋಜಿಸಲಾಯಿತು.
ಇದೇ ಸಂದರ್ಭದಲ್ಲಿ ಮಹಿಳಾ ಸಶಕ್ತತೆಯ, ಮಹಿಳಾಪರ ವಿವಿಧ ಮಾದರಿಗಳ ಮಾಹಿತಿಯನ್ನು ಲಿಂಗತ್ವ ತಜ್ನೆ ವಾಣಿ ಪೆರಿಯೋಡಿ ನೀಡಿದರು. ಮಿ ಟೂ , ಬೆಲ್ ಬಜಾವೊ, ಮಹಿಳಾ ನ್ಯಾಯಾಲಯ, ಗುಲಾಭಿ ಗ್ಯಾಂಗ್ ಇತ್ಯಾದಿ. ಅಭಿವೃದ್ಧಿಪರ ಕೆಲಸ ಮಾಡುವ ನಮ್ಮಲ್ಲಿ ನಿಲುವಿನ ಸ್ಪಷ್ಟತೆ ಇರಬೇಕು. ಓದುವಿಕೆ ಬಹಳ ಅಗತ್ಯ, ನಾವೇ ಮಾದರಿಗಳಾಗುವತ್ತ ಪ್ರಯತ್ನಿಸಬೇಕು ಎಂದರು. ನಂತರ ರಾಜ್ಯ ಪೂರಕ ಕಾನೂನು ಸುಗಮಕಾರರ ಸಮುಚ್ಚಯದ 13 ಮಂದಿಯ ಆಡಳಿತ ಸಮಿತಿಯ ಆಯ್ಕೆ ಮಾಡಲಾಯಿತು.
ಬಾಗಲಕೋಟೆಯಿಂದ ಮೋದಿನ್ ವಾಲಿಕರ್-ವಿಜಯಲಕ್ಷ್ಮಿ, ಬಳ್ಳಾರಿಯಿಂದ ಲಕ್ಷ್ಮಿ-ನಿಂಗಪ್ಪ, ಕೊಪ್ಪಳದಿಂದ ಶಂಕರ್ ಸುರಾಳ, ಗದಗದಿಂದ ಗಿರಿಜಾ ಪಾಟೀಲ-ಫಕ್ಕೀರಮ್ಮ ಎಸ್, ಧಾರವಾಡದಿಂದ ವಿಜಯಾ ಬಿಎನ್- ಕುಸುಮಾ, ಚಿತ್ರದುರ್ಗದಿಂದ ಅಂಬುಜಾ-ದುರ್ಗಾ, ದಕ್ಷಿಣ ಕನ್ನಡದಿಂದ ಹರಿಣಿ-ಸುರೇಖ ಆಯ್ಕೆಯಾದರು. ರಾಜ್ಯ ಸಮುಚ್ಚಯದ ಅಧ್ಯಕ್ಷರಾಗಿ ಹರಿಣಿ, ಉಪಾಧ್ಯಕ್ಷರಾಗಿ ಶಂಕರ್, ಕಾರ್ಯದರ್ಶಿಯಾಗಿ ಫಕ್ಕೀರಮ್ಮ, ಸಹಕಾರ್ಯದರ್ಶಿಯಾಗಿ ಕುಸುಮಾ, ಖಜಾಂಚಿಯಾಗಿ ಲಕ್ಷ್ಮಿ ಆಯ್ಕೆಯಾದರು.
ರಾಜ್ಯ ಸೇವಾ ಪ್ರಾಧಿಕಾರದಂತಹ ನ್ಯಾಯ ವ್ಯವಸ್ಥೆಗಳ ಅಧಿಕಾರಿಗಳ ಭೇಟಿ, ವಿವಿಧ ಇಲಾಖೆಗಳೊಂದಿಗೆ ಸಂಪರ್ಕ, ಜಿಲ್ಲಾ ಸಮುಚ್ಚಯದ ಚಟುವಟಿಕೆಗಳ ಉಸ್ತುವಾರಿ, ಸಭೆ-ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಗಳ ಯೋಜನೆಯು ರಾಜ್ಯ ಸಮಿತಿಯ ಕರ್ತವ್ಯವಾಗಿದ್ದು ಅದನ್ನು ಚೆನ್ನಾಗಿ ನಿರ್ವಹಿಸಲು ಮರ್ಲಿನ್‌ರವರು ತಿಳಿಸಿದರು. 2 ದಿನದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡೀಡ್ಸ್ ನಿರ್ದೇಶಕಿ ಮರ್ಲಿನ್ ಮಾರ್ಟಿಸ್, ಕಾರ್ಯಕ್ರಮ ಸಂಯೋಜಕ ತುಕಾರಾಮ ಎಕ್ಕಾರು, ವಕಾಲತ್ತು ಅಧಿಕಾರಿ ಖುಶಿ ದೇಸಾಯಿ ಭಾಗವಹಿಸಿದ್ದರು. ಡೀಡ್ಸ್‌ನ ದಾಖಲಾತಿ ಸಂಯೋಜಕಿ ಜೆಸಿಂತಾ ಫಿರೇರಾ, ಕಾನೂನು ಸಂಯೋಜಕಿ ದೀಪಾ ಎಮ್, ಹಣಕಾಸು ವ್ಯವಸ್ಥಾಪಕಿ ಕಾವ್ಯ, ಸಹಾಯಕ ಹಣಕಾಸು ವ್ಯವಸ್ಥಾಪಕಿ ನಿಖಿತಾ, ಕಾರ್ಯಕ್ಷೇತ್ರ ಸಂಯೋಜಕಿ ಸರಿತಾ ಉಪಸ್ಥಿತರಿದ್ದರು. ಡೀಡ್ಸ್ ಮಂಗಳೂರು ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ 7 ಜಿಲ್ಲೆಗಳ 35 ಮಂದಿ ಸುಗಮಕಾರ ಪ್ರತಿನಿಧಿಗಳು ಭಾಗವಹಿಸಿದ್ದರು. ಖುಶಿ ಸ್ವಾಗತಿಸಿದರು. ಫಕ್ಕೀರಮ್ಮ ಧನ್ಯವಾದವಿತ್ತರು.