ಮಂಗಳೂರು: ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಪತ್ರಿಕೋದ್ಯಮ ವಿಭಾಗದ ಸಹಯೋಗದೊಂದಿಗೆ ಫೋಟೋಜರ್ನಲಿಸಂ ಕಾರ್ಯಗಾರವು ಡಾ. ಪಿ. ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಮಂಗಳೂರು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ವೇಣು ಶರ್ಮ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಪತ್ರಿಕೋದ್ಯಮದಲ್ಲಿ ತಮ್ಮ ಅನುಭವ ಹಾಗೂ ಆ ಅನುಭವಗಳು ಬದುಕಿಗೆ ಹೇಗೆ ಬೆಳಕನ್ನು ನೀಡಿತು ಎಂದು ವಿವರಿಸಿ, ಪತ್ರಿಕೋದ್ಯಮವು ವಿದ್ಯಾರ್ಥಿಗಳ ಬದುಕನ್ನು ಬೆಳಗಿಸುವ ದೀವಿಗೆಯಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ ಮಾತನಾಡಿ ಪತ್ರಿಕೋದ್ಯಮ ವಿಭಾಗವು ಬದುಕಿಗೆ ದಾರಿ ನೀಡುವ ಕಲಿಕಾ ವಿಷಯವಾಗಿದ್ದು, ಇಂತಹ ಕಾರ್ಯಗಾರಗಳನ್ನು ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಟೈಮ್ಸ್ ಆಫ್ ಇಂಡಿಯಾದ ಫೋಟೋ ಜರ್ನಲಿಸ್ಟ್ ಆದ ರವಿ ಪೊಸವಣಿಕೆ ಅವರು ಛಾಯಾಗ್ರಹಣದ ವಿಧ, ಶೈಲಿ, ತಂತ್ರಗಾರಿಕೆ, ಛಾಯಾಗ್ರಾಹಕನು ಹೇಗಿರಬೇಕು ಹಾಗೂ ಉತ್ತಮ ಛಾಯಾಗ್ರಾಹಕನಾಗುವುದು ಹೇಗೆ ಎಂಬ ವಿಚಾರದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಸಂಯೋಜಕರಾದ ಪತ್ರಿಕೋದ್ಯಮದ ಉಪನ್ಯಾಸಕಿ ಚೇತನಾ ನಾಯಕ್ ಸಾವಿರ ಪದಗಳಲ್ಲಿ ಬಣ್ಣಿಸಲಾಗದ್ದನ್ನು ಒಂದು ಛಾಯಾಚಿತ್ರವು ಬಣ್ಣಿಸುತ್ತದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಂತಿಮ ಬಿ.ಎ ವಿದ್ಯಾರ್ಥಿಗಳಾದ ಗಾಯತ್ರಿ ಹಾಗೂ ಸುಜಾತಾ ಪ್ರಾರ್ಥನೆಗೈದರು. ರಮ್ಯ ಎಂ. ಸ್ವಾಗತಿಸಿ, ಮಂಜುನಾಥ ವಂದಿಸಿದರು. ಪತ್ರಿಕೋದ್ಯಮ ವಿಭಾಗ ಸಂಯೋಜಕರಾದ ಪ್ರೊ. ಶಾಂತಿ, ಪ್ರಥಮ, ದ್ವಿತೀಯ ಹಾಗೂ ಅಂತಿಮ ಪಿ.ಜೆ.ಕೆ/ ಪಿ.ಜೆ.ಇ. ಆಯ್ಕೆ ಆಧಾರಿತ ಪತ್ರಿಕೋದ್ಯಮ ಪತ್ರಿಕೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.