ಕುಂದಾಪುರ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ – ಸಂಜೀವಿನಿ ಕುಂದಾಪುರ, ಬೈಂದೂರು ತಾಲೂಕುಗಳ, ತಾಲೂಕು ಮಟ್ಟದ ಒಕ್ಕೂಟ ರಚನೆ, ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಅಧ್ಯಕ್ಷತೆ ವಹಿಸದ್ದ ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ವೇತಾ ಎನ್ ಮಾತನಾಡಿ, ಸಂಜೀವಿನಿ ಯೋಜನೆ ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಪರಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದ್ದು ತಾಲೂಕು ಮಟ್ಟದ ನೂತನ ಒಕ್ಕೂಟ ರಚನೆಯಿಂದ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದರು.
ಬೈಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಎನ್ ಕಾರ್ಯಕ್ರಮವನ್ನು ಉದ್ಘಾಟಿಸುವುದರ ಮೂಲಕ ನೂತನವಾಗಿ ರಚನೆಯಾಗಿರುವ ಉನ್ನತಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಬೈಂದೂರು ಹಾಗೂ ಚಿತ್ತಾರ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಕುಂದಾಪುರ ಈ ಎರಡು ಒಕ್ಕೂಟಗಳು ಸಂಜೀವಿನಿ ಯೋಜನೆಯನ್ನು ಹಳ್ಳಿ-ಹಳ್ಳಿಗಳಿಗೂ ತಲುಪಿಸಿ ಹಳ್ಳಿ ಜನರನ್ನು ಒಗ್ಗೂಡಿಸುವುದರ ಮೂಲಕ ಸರಕಾರದ ಆಶಯವಾದ ಮಹಿಳಾ ಆರ್ಥಿಕ ಸಬಲೀಕರಣವಾಗಲಿ ಎಂದರು.
ಉನ್ನತಿ ಸಂಜೀವಿನಿ ಒಕ್ಕೂಟ ಬೈಂದೂರು ಇದರ ನೂತನ ಅಧ್ಯಕ್ಷರಾಗಿ ಸುಶೀಲಾ ನಾವುಂದ, ಉಪಾಧ್ಯಕ್ಷರಾಗಿ ನಾಗವೇಣಿ ಶಿರೂರು, ಕಾರ್ಯದರ್ಶಿ ವೀಣಾ ಬಿಜೂರು, ಜೊತೆ ಕಾರ್ಯದರ್ಶಿ ಲತಾ ಮರವಂತೆ, ಕೋಶಾಧಿಕಾರಿ ನಾಗರತ್ನಾ ಕಾಲ್ತೋಡು, ಹಾಗೂ ಚಿತ್ತಾರ ಸಂಜೀವಿನಿ ಒಕ್ಕೂಟ ಕುಂದಾಪುರ ಇದರ ನೂತನ ಅಧ್ಯಕ್ಷರಾಗಿ ವಿಜಯ ಗುಜ್ಜಾಡಿ, ಉಪಾಧ್ಯಕ್ಷರಾಗಿ ದೇವಿ ತೆಕ್ಕಟ್ಟೆ, ಕಾರ್ಯದರ್ಶಿ ಪ್ರೇಮಾ ಹಕ್ಲಾಡಿ, ಜೊತೆ ಕಾರ್ಯದರ್ಶಿ ಸುಜಾತ ಶೆಟ್ಟಿ ಕರ್ಕುಂಜೆ, ಕೋಶಾಧಿಕಾರಿ ಗಾಯತ್ರಿ ಚಿತ್ತೂರು ಆಯ್ಕೆಯಾದರು.
ಜಿ.ಪಂ ಸಹಾಯಕ ನಿರ್ದೇಶಕ ಜೇಮ್ಸ್ ಡಿಸಿಲ್ವಾ, ತಾಲೂಕು ಒಕ್ಕೂಟದ ಉದ್ದೇಶ, ಗುರಿ ಹಾಗು ನೂತನ ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ ವ್ಯವಸ್ಥಾಪಕಿ ನವ್ಯ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಯತೀಶ್, ಅಶ್ವಿತಾ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕ ಪ್ರಶಾಂತ್ ಸ್ವಾಗತಿಸಿ, ವಲಯ ಮೇಲ್ವಿಚಾರಕಿ ರಂಜಿತಾ ನಿರೂಪಿಸಿದರು. ಸವಿತಾ ವಂದಿಸಿದರು.