ಉಡುಪಿ: ಇನಾಯತ್ ಆರ್ಟ್ ಗ್ಯಾಲರಿ ಮತ್ತು ಜಯಂಟ್ಸ್ ಗ್ರೂಪ್ ಆಫ್ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಇನಾಯತ್ ಗ್ಯಾಲರಿಯಲ್ಲಿ ಜಿಲ್ಲಾ ಮಟ್ಟದ ಡ್ರಾಯಿಂಗ್ ಸ್ಪರ್ಧೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ. ರಘುಪತಿ ಭಟ್, ಮಣ್ಣು ಉಳಿಸಿ ವಿಷಯದ ಬಗ್ಗೆ ನಡೆಯುವ ಈ ಕಾರ್ಯಕ್ರಮ ಅತ್ಯಂತ ಅಭಿನಂದನೀಯ. ಮುಂದಿನ ಪೀಳಿಗೆಗೆ ಈ ಪರಿಸರ ಉಳಿಸಬೇಕಾದರೆ ಮಣ್ಣಿನ ರಕ್ಷಣಿ ಅತ್ಯಂತ ಅಗತ್ಯವಾಗಿ ನಡೆಯಬೇಕು.
ಮಕ್ಕಳ ಮನೋವಿಕಾಸಕ್ಕೆ ಕಲೆಯು ಪ್ರೇರಣೆಯಾಗಿದೆ. ಈ ನಿಟ್ಟಿನಲ್ಲಿ ಕಳೆದ 25 ವರ್ಷಗಳಿಂದ ಲಿಯಾಖತ್ ಆಲಿಯವರಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯ ಶ್ಲಾಘನೀಯ ಎಂದರು.
ಇಶಾ ಫೌಂಡೇಶನ್ ಪ್ರಮುಖರಾದ ಪ್ರವೀಣ್ ಕುಮಾರ್ ಮಣ್ಣು ಉಳಿಸಿ ಅಭಿಯಾನದ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಶಶಿಧರ ಶೆಟ್ಟಿ, ನಗರಸಭಾ ಸದಸ್ಯ ಗಿರೀಶ್ ಅಂಚನ್, ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ್ ಕೆ ಅಮೀನ್, ಜಯಂಟ್ಸ್ ಅಧ್ಯಕ್ಷ ಇಕ್ಬಾಲ್ ಮನ್ನಾ, ಗ್ಯಾಲರಿಯ ನಿರ್ದೇಶಕ ಲಿಯಾಖತ್ ಆಲಿ ಮುಂತಾದವರಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 300 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಅನಂತ್ ಶೇಟ್ ಪ್ರಾರ್ಥಿಸಿದರು. ಗಣೇಶ್ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.