ನಾವುಂದ: ವಿಶ್ವ ಪರಿಸರ ದಿನಾಚರಣೆ ಹಾಗೂ ಸಂಜೀವಿನಿ ಪೌಷ್ಟಿಕ ಕೈ ತೋಟ ರಚನೆ ಅಭಿಯಾನದ ಅಂಗವಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯ ಸಂಗಮ ಸಂಜೀವಿನಿ ಒಕ್ಕೂಟ, ಗ್ರಾಮ ಪಂಚಾಯತ್ ನಾವುಂದ ಇಲ್ಲಿಯ ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿವಿಧ ರೀತಿಯ ಹೂವು ಹಣ್ಣು ತರಕಾರಿ ಹಾಗೂ ಪೌಷ್ಟಿಕ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ತಾಲ್ಲೂಕು ವಲಯ ಮೇಲ್ವಿಚಾರಕ ಪ್ರಶಾಂತ್, ಸಂಗಮ ಸಂಜೀವಿನಿ ಒಕ್ಕೂಟದ ಅದ್ಯಕ್ಷರಾದ ಸುಶೀಲ, ಉಪಾದ್ಯಕ್ಷರಾದ ಶಾರದ, ಕಾರ್ಯದರ್ಶಿ ಪ್ರೇಮ, ಜಯಶ್ರೀ ಎಂ., ಬಿ.ಕೆ ಕಸ್ತೂರಿ, ಶಾಂತ, ಜಾಂಬವತಿ, ಪ್ರೇಮ, ಅಂಗನವಾಡಿ ಕಾರ್ಯಕರ್ತೆ ಶರಾವತಿ, ಸಹಾಯಕಿ ಸಾಕು, ಪದಾಧಿಕಾರಿಗಳಾದ ಶ್ಯಾಮಲ, ಸುನೀತಾ, ಮೂಕಾಂಬು, ಸಂಗೀತಾ, ನಾಗರತ್ನ ಉಪಸ್ಥಿತರಿದ್ದರು.