ಮಂಗಳೂರು: ಡಾ. ಪಿ. ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 1.60 ಕೋಟಿ ವೆಚ್ಚದ ಅಭಿವೃದ್ಧಿ ವಿಸ್ತರಣಾ ಕಾಮಗಾರಿಯ ಪೂಜಾ ಕಾರ್ಯಕ್ರಮವನ್ನು ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವೇದವ್ಯಾಸ ಕಾಮತ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಲೇಜಿನಲ್ಲಿ ಅತ್ಯಂತ ಗರಿಷ್ಠ ಸಂಖ್ಯೆಯಲ್ಲಿ ಗ್ರಾಮೀಣ ಹಾಗೂ ನೆರೆಯ ರಾಜ್ಯದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ರಾಜ್ಯಮಟ್ಟದಲ್ಲಿ ಖ್ಯಾತಿ ಪಡೆದ ಬಗ್ಗೆ ಹಾಗೂ ಈ ಸಾಲಿನಲ್ಲಿ ಕಾಲೇಜಿಗೆ ೨ ರ‍್ಯಾಂಕ್‌ಗಳು ದೊರೆತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಮುಂದಿನ ಸಾಲಿನಲ್ಲಿ ಇನ್ನಷ್ಟು ಹೆಚ್ಚು ರ‍್ಯಾಂಕ್‌ಗಳು ಕಾಲೇಜಿಗೆ ದೊರಕಲಿ ಎಂದು ವಿದ್ಯಾರ್ಥಿಗಳಲ್ಲಿ ಆಶಯ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ ರವರು ಅಭಿವೃದ್ಧಿ ವಿಸ್ತರಣಾ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ., ಮಹಾನಗರ ಪಾಲಿಕೆ ಸದಸ್ಯರು ಹಾಗೂ ಬಂದರು ವಾರ್ಡಿನ ಕಾರ್ಪೋರೇಟರಾದ ಝೀನತ್ ಶಂಶುದ್ದೀನ್, ಡೊಂಗರಕೇರಿ ವಾರ್ಡಿನ ಕಾರ್ಪೋರೇಟರಾದ ಜಯಶ್ರೀ ಕುಡುವ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಹಾಗೂ ಮಾಜಿ ಉಪಮೇಯರ್ ರಾಜೇಂದ್ರ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅರುಣ್ ಜಿ ಶೇಟ್, ಹರಿಪ್ರಸಾದ್, ಜನಾರ್ಧನ ಕುಡ್ವ, ದಿನೇಶ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗುರುಪ್ರಸಾದ್, ಶೈಕ್ಷಣಿಕ ವಿದ್ಯಾರ್ಥಿ ಪರಿಷತ್ತಿನ ಸ್ನಾತಕೋತ್ತರ ವಿಭಾಗದ ಮುಖಂಡ ಲೋಹಿತ್ ಬಿ.ಎ., ದ್ವಿತೀಯ ಎಂ.ಎ., ಸ್ನಾತಕ ವಿಭಾಗದ ಮುಖಂಡ ಜಗದೀಶ ವೈ, ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.