ಸೃಜನಾತ್ಮಕ ಡೂಡಲ್ ಗಳ ಮೂಲಕ ಜಾಗೃತಿ ಮೂಡಿಸುತ್ತಿರುವ ಗೂಗಲ್ ಇಂದು ವಿಶ್ವ ಭೂಮಿ ದಿನದ ಪ್ರಯುಕ್ತ ತನ್ನ ಮುಖಪುಟದಲ್ಲಿ ಟೈಮ್ ಲ್ಯಾಪ್ಸ್‌ನೊಂದಿಗೆ ಭೂಮಿ ದಿನದ ಕುರಿತು ವಿಶಿಷ್ಟವಾಗಿ ಜಾಗೃತಿಯನ್ನು ಮೂಡಿಸಿದೆ.
ಗೂಗಲ್ ಅರ್ಥ್ ಸಂಗ್ರಹಿಸಿದ ಚಿತ್ರಗಳ ಸಂಕಲನದ ಮೂಲಕ ಟೈಮ್ ಲ್ಯಾಪ್ಸ್ ಅನ್ನು ರಚಿಸಲಾಗಿದೆ. ಹವಳದ ಬಂಡೆಗಳು, ಹಿಮನದಿಗಳು ಮತ್ತು ಸಾಮಾನ್ಯ ಹಸಿರು ಸೇರಿದಂತೆ ಭೂಮಂಡಲದ ಹಲವಾರು ಭಾಗಗಳನ್ನು ತೋರಿಸುತ್ತದೆ, ಇದು ದಶಕಗಳಿಂದ ಯಾವ ರೀತಿ ಕಡಿಮೆಯಾಗಿದೆ ಎಂಬುದನ್ನು ಗಮನಿಸಬಹುದು.
ನೀವು ಇಂದು ಗೂಗಲ್ ಡೂಡಲ್ ಅನ್ನು ಕ್ಲಿಕ್ ಮಾಡಿದಾಗ, ಹವಾಮಾನ ಬದಲಾವಣೆಯ ಬಗ್ಗೆ ಗೂಗಲ್ ಜಾಗೃತಿ ಮೂಡಿಸಿದೆ. ಸಮಸ್ಯೆಗೆ ಕಾರಣ ಮತ್ತು ಸಾಮಾನ್ಯ ಜನರ ಮೇಲೆ ಅದರ ವಿವಿಧ ಪರಿಣಾಮಗಳಂತಹ ಹಲವಾರು ಅಂಶಗಳನ್ನು ಸಹ ವಿವರಿಸುತ್ತದೆ.
ಭೂಮಿಯ ಮೇಲಿನ ಹವಾಮಾನ ಬದಲಾವಣೆಗೆ ಪ್ರಮುಖ ಕಾರಣವೆಂದರೆ ಹಸಿರುಮನೆ ಅನಿಲ ಹೊರಸೂಸುವಿಕೆ ಎಂದು ಗೂಗಲ್ ವಿವರಿಸಿದೆ. ವಿಶ್ವಸಂಸ್ಥೆಯ ಪ್ರಕಾರ, “ಹಸಿರುಮನೆ ಅನಿಲ ಹೊರಸೂಸುವಿಕೆಗಳು ಭೂಮಿಯ ಮೇಲೆ ಹೊದಿಕೆಯಾಗಿ, ಅವು ಸೂರ್ಯನ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ.
UN ActNow 2022 ರ ಭೂದಿನದ ಸಂದರ್ಭದಲ್ಲಿ ಹವಾಮಾನ ಬದಲಾವಣೆಯ ವಿರುದ್ಧ ಜನರು ಕ್ರಮ ಕೈಗೊಳ್ಳುವ ಹಲವಾರು ವಿಧಾನಗಳನ್ನು ಸಹ ಹೇಳಿದೆ. ಜನರು ಮನೆಯಲ್ಲಿ ಹೆಚ್ಚಿನ ಶಕ್ತಿಯನ್ನು ಉಳಿಸಲು, ಕೆಲಸ ಮಾಡಲು ಸಾರ್ವಜನಿಕ ಸಾರಿಗೆಯನ್ನು ತೆಗೆದುಕೊಳ್ಳಲು ಮತ್ತು ಹೆಚ್ಚು ತರಕಾರಿಗಳು ಮತ್ತು ಕಡಿಮೆ ಮಾಂಸವನ್ನು ತಿನ್ನಲು ಪ್ರೋತ್ಸಾಹಿಸಲಾಗಿದೆ.
ನಮ್ಮ ಗ್ರಹದ ಮೇಲೆ ಹಾನಿಯನ್ನುಂಟುಮಾಡುವ ವಿವಿಧ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 22 ರಂದು ವಿಶ್ವ ಭೂ ದಿನವನ್ನು ಆಚರಿಸಲಾಗುತ್ತದೆ. ಮುಖ್ಯವಾಗಿ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ. ಜನರು ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರಲು ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ನಿಧಾನಗೊಳಿಸಲು ವಿವಿಧ ರೀತಿಯಲ್ಲಿ ಗಮನ ಸೆಳೆಯಲು ಭೂ ದಿನವನ್ನು ಆಚರಿಸಲಾಗುತ್ತದೆ.