ಉಡುಪಿ: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಹಾಗೂ ಆದರ್ಶ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಪ್ರಿವೆನ್ಟೀವ್ ಹೆಲ್ತ್ ಕೇರ್ ಟ್ರೆöÊನಿಂಗ್ ಅಂಡ್ ಚೆಕ್ಅಪ್ ಯೋಜನೆಯಡಿ, ಜಿಲ್ಲೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಏಪ್ರಿಲ್ 19 ರಿಂದ ಮೇ 7 ರವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರದ ವೇಳಾಪಟ್ಟಿ ಹೀಗಿದೆ:
ಏಪ್ರಿಲ್ 19 ರಂದು ಕುಕ್ಕುಂದೂರು ಅಂಬೇಡ್ಕರ್ ಸಭಾಭವನ ಹಾಗೂ ಹಿರ್ಗಾನ ಗ್ರಾಮ ಪಂಚಾಯತ್ ಸಭಾಭವನ, ಏ.20 ರಂದು ದುರ್ಗಾ ಹಾಗೂ ಮಿಯ್ಯಾರು ಗ್ರಾಮ ಪಂಚಾಯತ್ ಸಭಾಭವನ, ಏ.22 ರಂದು ಇನ್ನಾ ಹಾಗೂ ಸಾಣೂರು ಗ್ರಾಮ ಪಂಚಾಯತ್ ಸಭಾಭವನ, ಏ. 23 ರಂದು ಪಿಲಿಯೂರು ಬೋಳಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ, ಏ. 24 ರಂದು ಮುಂಡ್ಕೂರು ಹಾಗೂ ರೆಂಜಾಳ ಗಾಮ ಪಂಚಾಯತ್ ಸಭಾಭವನ, ಏ. 26 ರಂದು ಬೆಳ್ಮಣ್ ಹಾಗೂ ಪಳ್ಳಿ ಗ್ರಾಮ ಪಂಚಾಯತ್ ಸಭಾಭವನ, ಏ. 27 ರಂದು ನಿಟ್ಟೆ ಹಾಗೂ ಮುಡಾರು ಗಾಮ ಪಂಚಾಯತ್ ಸಭಾಭವನ, ಏ. 28 ರಂದು ನಲ್ಲೂರು ಹಾಗೂ ಈದು ಗ್ರಾಮ ಪಂಚಾಯತ್ ಸಭಾಭವನ, ಏ. 29 ರಂದು ಮಾಳ ಹಾಗೂ ಕೇರ್ವಾಶೆ ಗ್ರಾಮ ಪಂಚಾಯತ್ ಸಭಾಭವನ, ಏ. 30 ರಂದು ಶಿರ್ಲಾಲು ಹಾಗೂ ನೀರೆ ಗ್ರಾಮ ಪಂಚಾಯತ್ ಸಭಾಭವನ, ಮೇ. 2 ರಂದು ಬೈಲೂರು ಹಾಗೂ ಮರ್ಣೆ ಗ್ರಾಮ ಪಂಚಾಯತ್ ಸಭಾಭವನ, ಮೇ. 3 ರಂದು ಕಡ್ತಲ ಗ್ರಾಮ ಪಂಚಾಯತ್ ಸಭಾಭವನ ಹಾಗೂ ಕಲ್ಯಾ ಸರ್ಕಾರಿ ಪ್ರೌಢಶಾಲೆ, ಮೇ. 4 ರಂದು ಇರ್ವತ್ತೂರು ಹಾಗೂ ಎರ್ಲಪಾಡಿ ಗ್ರಾಮ ಪಂಚಾಯತ್ ಸಭಾಭವನ, ಮೇ. 5 ರಂದು ವರಂಗ ಹಾಗೂ ಮುದ್ರಾಡಿ ಗ್ರಾಮ ಪಂಚಾಯತ್ ಸಭಾಭವನ, ಮೇ.6 ಹೆಬ್ರಿ ಹಾಗೂ ಶಿವಪುರ ಗ್ರಾಮ ಪಂಚಾಯತ್ ಸಭಾಭವನ ಮತ್ತು ಮೇ. 7 ರಂದು ಚಾರಾ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬೆಳಗ್ಗೆ 10.30 ರಿಂದ ಸಂಜೆ 6 ರ ವರೆಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
18 ರಿಂದ 60 ವರ್ಷದೊಳಗಿನ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರು, ಕಟ್ಟಡ ಕಾರ್ಮಿಕ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ, ಆಧಾರ್ ಗುರುತಿನ ಚೀಟಿಯ ಜೆರಾಕ್ಸ್ ಹಾಗೂ ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.