ನವದೆಹಲಿ: ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಭಾನುವಾರ ಸತತ ಎರಡು ಬಾರಿ ಭೂಮಿ ಕಂಪಿಸಿದೆ. ಭಾನುವಾರ ಬೆಳಿಗ್ಗೆ ಮೊದಲ ಭೂಕಂಪ ಸಂಭವಿಸಿದ್ದು, ಸಂಜೆ ಮತ್ತೊಮ್ಮೆ ಭೂಮಿ ಕಂಪಿಸಿದೆ.
ರಿಕ್ಟರ್ ಮಾಪಕದಲ್ಲಿ 4.9 ಮತ್ತು 4.6 ದಾಖಲಾಗಿದ್ದು, ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಎಂದು ಎನ್.ಸಿ.ಎಸ್ ಸಂಸ್ಥೆ ತಿಳಿಸಿದೆ.