ಮಲ್ಪೆ: ಕೊಡವೂರು ವಾರ್ಡ್ ನಲ್ಲಿ ಸಾವಯವ ತರಕಾರಿ ಬೆಳೆಸಿ ಕೆಮಿಕಲ್ ಆಹಾರದಿಂದ ದೂರವಾಗಿ ಉತ್ತಮ ಆರೋಗ್ಯ ನಿರ್ಮಿಸಲು ಸಾಧ್ಯವಿದೆ ಎಂದು ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಹೇಳಿದರು.
ಕೊಡವೂರು ವಾರ್ಡಿನ ವೈಷ್ಣವಿ ಲೇಔಟ್ ಪರಿಸರದಲ್ಲಿ ಸಾಹಸ್ ಸಂಸ್ಥೆ ಮತ್ತು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ವತಿಯಿಂದ ನಡೆದ ಉಚಿತ ತರಕಾರಿ ಬೀಜ ವಿತರಣೆ ಮತ್ತು ಹಸಿ ಕಸದಿಂದ ಗೊಬ್ಬರ ಮಾಡಲು ಉಚಿತ ಕಾಂಪೋಸ್ಟ್ ಡ್ರಮ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಸಿಕಸ ಬಿಸಾಡುವ ವಸ್ತು ಅಲ್ಲ, ಅದರಿಂದ ಡ್ರಮ್ ಕಾಂಪೋಸ್ಟ್ ಗೊಬ್ಬರವನ್ನು ಮಾಡಿ ಆ ಗೊಬ್ಬರವನ್ನು ಮನೆಯಲ್ಲಿ ಸಾವಯವ ತರಕಾರಿ ಮಾಡಿಕೊಂಡು ನಮ್ಮ ಆರೋಗ್ಯವನ್ನು ಕೆಮಿಕಲ್ ಆಹಾರದಿಂದ ದೂರಮಾಡಲು ಸಾಧ್ಯವಿದೆ. ಅದೇ ರೀತಿ ಕ್ಯಾನ್ಸರ್ ರೋಗ ಬರದಂತೆ ತಡೆಗಟ್ಟಲು ಸಾಧ್ಯವಿದೆ.
ಕೊಡವೂರು ವಾರ್ಡ್ ನಲ್ಲಿ ಕ್ಯಾನ್ಸಾರ್ ರೋಗ ಬಾರದಂತೆ ಈ ಒಂದು ಪುಟ್ಟ ಪ್ರಯತ್ನವನ್ನು ಕೊಡವೂರು ನಾಗರಿಕರ ಸಹಯೋಗದಿಂದ ಆಸಕ್ತಿಯಿಂದ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಸಾಹಸ್ ಸಂಸ್ಥೆಯ ಸೂಪರ್ವೈಸರ್ ಆಗಿರುವ ವಿಶಾಲಾಕ್ಷಿ ದೇವಾಡಿಗ ಇವರು ಸಂಪೂರ್ಣ ಮಾಹಿತಿಯನ್ನು ನೀಡಿದರು.
ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್ ಸ್ವಾಗತಿಸಿ ವಿನಯ್ ಗರ್ಡೆ ವಂದಿಸಿದರು.