ಕಾರ್ಕಳ: ಗಣಿತ ನಗರದ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರಜ್ವಲ್ ಕುಲಾಲ್ ಇವರು ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ವಿಶಾಲಾಕ್ಷಿ ಬಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಸ್ಟಡೀಸ್ ಆನ್ ಹೈಬ್ರಿಡ್ ಪಾಲಿಮರ್ ಹೈಡ್ರೋಜೆಲ್ ನ್ಯಾನೋ ಕಾಂಪೋಸಿಟ್ಸ್; ಪ್ರಿಪರೇಶನ್, ಕ್ಯಾರಕ್ಟರೈಸೇಶನ್ ಆಂಡ್ ಅಪ್ಲಿಕೇಶನ್” ಮಹಾ ಪ್ರಬಂಧವನ್ನು ಪುರಸ್ಕರಿಸಿ ಮಂಗಳೂರು ವಿವಿಯು ಪಿ.ಎಚ್.ಡಿ. ಪದವಿ ನೀಡಿ ಗೌರವಿಸಿದೆ.
ಉತ್ತಮ ಕಾರ್ಯಕ್ರಮ ನಿರೂಪಕರಾಗಿ, ಕ್ರೀಡಾ ವೀಕ್ಷಕ ವಿವರಣೆಕಾರರಾಗಿ, ಕ್ವಿಜ್ ಮಾಸ್ಟರ್ ಆಗಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಇವರ ನೀರಿನ ಶುದ್ಧೀಕರಣ ಕ್ಷೇತ್ರದಲ್ಲಿನ ಪರಿಣಾಮಕಾರಿ ಸಂಶೋಧನೆಗಳನ್ನು ಗುರುತಿಸಿ 2020 ರಲ್ಲಿ ಕೊಲ್ಕತ್ತಾದ ಇಂಡಿಯನ್ ಕೆಮಿಕಲ್ ಸೊಸೈಟಿಯು ಯುವವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಿತ್ತು.
ಇವರ ಸಾಧನೆಯನ್ನು ಎಪಿಜಿಇಟಿಯ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಅಭಿನಂಧಿಸಿರುತ್ತಾರೆ. ಇವರು ಕಾರ್ಕಳ ತಾಲೂಕಿನ ಹಿರ್ಗಾನದ ಚಂದ್ರಶೇಖರ್ ಹಾಗೂ ಜಲಜ ದಂಪತಿಯ ಪುತ್ರ.