ನವದೆಹಲಿ: ಯುಗಾದಿ ಹಬ್ಬದ ಸಮಯದಲ್ಲಿ ಜನರಿಗೆ ಇಂಧನ ದರ ಏರಿಕೆಯ ಕಹಿ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪ್ರತಿ ಲೀಟರ್‌ಗೆ 80 ಪೈಸೆಯಷ್ಟು ಏರಿಕೆಯಾಗುವುದರೊಂದಿಗೆ ಇಂಧನ ಬೆಲೆಗಳು ಏರಿಕೆಯ ಹಾದಿಯಲ್ಲಿ ಮುಂದುವರೆದಿದೆ. ಇಲ್ಲಿಯವರೆಗೆ 12 ದಿನಗಳಲ್ಲಿ ಪ್ರತಿ ಲೀಟರ್‌ಗೆ ರೂಪಾಯಿ 7.20 ಏರಿಕೆಯಾಗಿದೆ.
ಕಳೆದ ವರ್ಷ ನವೆಂಬರ್ 4 ರಿಂದ ಇಂಧನ ಬೆಲೆಗಳ ಪರಿಷ್ಕರಣೆಯಲ್ಲಿ ವಿರಾಮವಿತ್ತು. ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದ ನಂತರ ಮಾರ್ಚ್ 22 ರಂದು ಇಂಧನ ಬೆಲೆ ಏರಿಕೆ ಪುನರಾರಂಭವಾಗಿತ್ತು.
ಕಳೆದ ವರ್ಷ ನವೆಂಬರ್ 3 ರಂದು ದೇಶಾದ್ಯಂತ ಚಿಲ್ಲರೆ ಬೆಲೆಗಳನ್ನು ತಗ್ಗಿಸಲು ಕೇಂದ್ರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 5 ರೂಪಾಯಿ ಮತ್ತು ಡೀಸೆಲ್ ಮೇಲೆ 10 ರೂಪಾಯಿಗಳಷ್ಟು ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಇದನ್ನು ಅನುಸರಿಸಿ ಹಲವಾರು ರಾಜ್ಯ ಸರ್ಕಾರಗಳು ಜನರಿಗೆ ಪರಿಹಾರ ನೀಡಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಕಡಿಮೆ ಮಾಡುವ ನಿರ್ಧಾರ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪರಿಷ್ಕೃತ ದರಗಳ ವಿವರ:
ನವದೆಹಲಿ- ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ. 102.61, ಡೀಸೆಲ್-93.87
ಮುಂಬಯಿ- ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ. 117.57, ಡೀಸೆಲ್-101.79
ಚೆನ್ನೈ- ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ. 108.21, ಡೀಸೆಲ್-108.21
ಕೊಲ್ಕತ್ತಾ- ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ. 112.19, ಡೀಸೆಲ್-97.02