ಮಂಗಳೂರು: ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ರಥಬೀದಿ ಮಂಗಳೂರು ಇದರ ಸಮಾಜಕಾರ್ಯ ವಿಭಾಗ (ಎಂ.ಎಸ್.ಡಬ್ಲ್ಯೂ) ವಿದ್ಯಾರ್ಥಿಗಳು, ಪ್ರಾಂಶುಪಾಲರಾದ ಪ್ರೊ. ರಾಜಶೇಖರ ಹೆಬ್ಬಾರ್, ಸಮಾಜಕಾರ್ಯ ಸಂಯೋಜಕ ಡಾ. ಶೇಷಪ್ಪ, ವಿಭಾಗ ಮುಖ್ಯಸ್ಥರಾದ ಪ್ರೊ. ಅರುಣಾ ಕುಮಾರಿ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಅಧ್ಯಯನ ಪ್ರವಾಸದ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಮಾನಸಧಾರಾ ಟ್ರಸ್ಟ್, ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ, ಪರ್ಫೆಕ್ಟ್ ಅಲಾಯ್ಸ್ ಕಾಂಪೊನೆಂಟ್ಸ್ ಪ್ರೈ.ಲಿ., ಶ್ರೀಧರ ಆಸ್ಪತ್ರೆ, ಮಾನಸಾ ನರ್ಸಿಂಗ್ ಹೋಮ್ ಹಾಗೂ ಶಾಹಿ ಎಕ್ಸ್ಪೋರ್ಟ್ಸ್ ಪ್ರೈ.ಲಿ ಗೆ ಭೇಟಿ ನೀಡಿದರು.
ಮಾನಸಾಧಾರಾ ಟ್ರಸ್ಟ್ ಆಪ್ತ ಸಮಾಲೋಚಕರಾದ ಪ್ರಫುಲ್, ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ಇದರ ಸಹಕಾರಿ ಸಂಘದ ಮ್ಯಾನೇಜರ್ ದೇವದಾನ್, ಪರ್ಫೆಕ್ಟ್ ಅಲಾಯ್ಸ್ ಕಾಂಪೊನೆಂಟ್ಸ್ ಪ್ರೈ.ಲಿ. ಮಾನವ ಸಂಪನ್ಮೂಲ ವಿಭಾಗದ ನವೀನ್, ಶ್ರೀಧರ ಆಸ್ಪತ್ರೆಯ ನಿರ್ದೇಶಕ ಡಾ. ಶ್ರೀಧರ್, ಮಾನಸಾ ನರ್ಸಿಂಗ್ ಹೋಮ್ ಹಿರಿಯ ವೈದ್ಯರಾದ ಡಾ. ಗಣೇಶ್ ರಾವ್ ನಾಡಿಗೇರ್, ಶಾಹಿ ಎಕ್ಸ್ಪೋರ್ಟ್ಸ್ ಪ್ರೈ.ಲಿ ಇದರ ಮಾನವ ಸಂಪನ್ಮೂಲ ವಿಭಾಗದ ಮ್ಯಾನೇಜರ್ ಪ್ರಿತೇಶ್ ವಿಸ್ತ್ರತ ಮಾಹಿತಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಸಮಾಜಕಾರ್ಯ ಉಪನ್ಯಾಸಕರಾದ ಗಣೇಶ್ ಪ್ರಸಾದ್ ಜಿ. ನಾಯಕ್, ಮೆಹರೋಜ್ ತೋನ್ಸೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.