ಬಜಗೋಳಿ: ವೈದ್ಯಕೀಯ ಪ್ರಕೋಷ್ಠ ಉಡುಪಿ ಜಿಲ್ಲೆ ಕಾರ್ಕಳ, ಕೆ.ಎಂ.ಸಿ ಮಣಿಪಾಲ ಮತ್ತು ಮಂಗಳೂರು ಹಾಗೂ ರೋಟರಿ ಆಸ್ಪತ್ರೆ ಇದರ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಬಜಗೋಳಿ ಸರ್ಕಾರಿ ಶಾಲಾ ವಠಾರದಲ್ಲಿ ಇಂದು ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮೂಡರು ಪಂಚಾಯತ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಈ ರೀತಿಯ ಸೂಪರ್ ಸ್ಪೆಷಾಲಿಟಿ ಶಿಬಿರ ಮೊದಲ ಬಾರಿಗೆ ನಡೆಯುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಇದರಿಂದ ತುಂಬಾ ಪ್ರಯೋಜನವಾಗಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕ್ಷೇತ್ರಿಯ ಅಧ್ಯಕ್ಷ ಮಹಾವೀರ ಹೆಗ್ಡೆ, ಉದ್ಯಮಿ ಸದಾಶಿವ ಪೂಜಾರಿ, ಶಾಲಾ ಶಿಕ್ಷಕಿ ಲಿಲ್ಲಿ ಟೀಚರ್, ಕೆ.ಎಂ.ಸಿಯ ತಜ್ಞ ವೈದ್ಯರಾದ ಡಾ. ಈಶ್ವರ್ ಕೀರ್ತಿ, ಡಾ. ಯೋಗಿಶ್ ಕಾಮತ್, ಡ. ರೊಹಿತ್ ಪೈ, ಡಾ. ಶ್ರೀನಾಥ್ ಶೆಟ್ಟಿ, ಡಾ. ವಿಧ್ಯಾ ಭಾಟ್, ಡಾ. ಅನುಷಾ ಶೆಟ್ಟಿ, ಡಾ. ಸುಹಾಸ್ ಮುಂತಾದವರು ಉಪಸ್ಥಿತರಿದ್ದರು.
ವೈದ್ಯಕೀಯ ಪ್ರಕೋಷ್ಠ ಜಿಲ್ಲಾ ಸಂಚಾಲಕ ಡಾ. ರಾಮಚಂದ್ರ ಕಾಮತ್ ಪ್ರಸ್ತಾವನೆಗೈದರು. ಶಿಬಿರದ ಮುಖ್ಯಸಂಘಟಕ ವೈದರಾದ ಡಾ. ರಾಮದಾಸ್ ಹೆಗ್ಡೆ ಸ್ವಾಗತಿಸಿ, ಡಾ. ಗಣೇಶ್ ಕಾಮತ್ ವಂದಿಸಿದರು. ರಾಘವೇಂದ್ರ ಕರ್ವಾಲು ನಿರೂಪಿಸಿದರು. ಸುಮಾರು 200 ಮಂದಿ ಶಿಬಿರದ ಪ್ರಯೋಜನ ಪಡೆದರು.