Tuesday, November 26, 2024
Tuesday, November 26, 2024

ಚಲನಚಿತ್ರ ಉದ್ಯಮದಲ್ಲಿ ವಿಫುಲ ಉದ್ಯೋಗವಕಾಶ: ಅಶೋಕ್ ಕಶ್ಯಪ್

ಚಲನಚಿತ್ರ ಉದ್ಯಮದಲ್ಲಿ ವಿಫುಲ ಉದ್ಯೋಗವಕಾಶ: ಅಶೋಕ್ ಕಶ್ಯಪ್

Date:

ಉಡುಪಿ: ಭಾರತದ ಚಲನಚಿತ್ರ ಉದ್ಯಮದಲ್ಲಿ ವಿಫುಲ ಉದ್ಯೋಗವಕಾಶಗಳಿದ್ದು, ಪ್ರತಿ ವರ್ಷ 10 ಸಾವಿರದಿಂದ 20 ಸಾವಿರದವರೆಗೆ ಚಲನಚಿತ್ರ ಕ್ಷೇತ್ರದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳ ಅವಶ್ಯಕತೆಯಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ಅಶೋಕ್ ಕಶ್ಯಪ್ ಹೇಳಿದರು.

ಅವರು ಮಣಿಪಾಲದ ಎಮ್.ಐ.ಸಿ ಆಡಿಟೋರಿಯಂ ನಲ್ಲಿ, ಕರ್ನಾಟಕ ಚಲಚಿತ್ರ ಅಕಾಡೆಮಿ ಬೆಂಗಳೂರು , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಷನ್ ಇವರ ಸಹಯೋಗದಲ್ಲಿ ನಡೆದ, 5 ದಿನಗಳ ಚಲನಚಿತ್ರ ನಿರ್ಮಾಣ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಹಿಂದೆ ಚಲನಚಿತ್ರ ಉದ್ಯಮದಲ್ಲಿ ಪರಿಣಿತರನ್ನು ತಯಾರುಮಾಡಲು ಹಲವು ವರ್ಷಗಳೇ ಬೇಕಿದ್ದವು ಆದರೆ ಇಂದು ತಾಂತ್ರಿಕತೆ ಮತ್ತು ಈ ಕ್ಷೇತ್ರದಲ್ಲಿ ಅನುಭವ ಹೊಂದಿದ ಪರಿಣಿತರಿಂದ ತರಬೇತಿಗಳು ದೊರೆಯುತ್ತಿರುವುದರಿಂದ ಉತ್ತಮ ಪರಿಣಿತರು ಸೃಷ್ಟಿಯಾಗುತ್ತಿದ್ದಾರೆ.

ಹಲವು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಇದನ್ನು ಒಂದು ಕೋರ್ಸ್ ಆಗಿ ಬೋಧಿಸುತ್ತಿವೆ ಎಂದರು. ಚಲನಚಿತ್ರ ನಿರ್ಮಾಣದಲ್ಲಿ ಅನಿಮೇಶನ್, ಗ್ರಾಫಿಕ್ಸ್, ಉತ್ತಮ
ಗುಣಮಟ್ಟದ ವೀಡಿಯೋ ನಿರ್ದೇಶನ ವಿಭಾಗಗಳಲ್ಲಿ ಹೆಚ್ಚಿನ
ಸಂಖ್ಯೆಯಲ್ಲಿ ಭಾರತೀಯ ತಂತ್ರಜ್ಞರು ಕಾರ್ಯರ್ನಿಹಿಸುತ್ತಿದ್ದು, ಇವರು ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಚಲನಚಿತ್ರ ನಿರ್ಮಾಣದಲ್ಲಿ ಉದ್ಯೋಗ ಮಾಡುತ್ತಿದ್ದಾರೆ.

ಬಹಳಷ್ಟು ವಿದೇಶಿ ಚಲನಚಿತ್ರಗಳ ನಿರ್ದೇಶಕರು ಮತ್ತು ನಿರ್ಮಾಪಕರು ತಮ್ಮ ಚಿತ್ರ ನಿರ್ಮಾಣದ ತಾಂತ್ರಿಕ ಕಾರ್ಯಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಭಾರತದಲ್ಲಿ
ತಯಾರಿಸುತ್ತಿದ್ದಾರೆ.

ಚಲನಚಿತ್ರ ವಿಭಾಗದ ವಿದ್ಯಾರ್ಥಿಗಳು ಚಿತ್ರ ನಿರ್ಮಾಣದ ಕೌಶಲ್ಯಗಳನ್ನು ಅರಿಯುವುದು ಅತ್ಯಂತ ಅಗತ್ಯವಿದೆ ಎಂದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ, ಕರ್ನಾಟಕದ ಎಲ್ಲಾ ಭಾಷೆಗಳ ಹಳೆಯ ಚಲನಚಿತ್ರಗಳನ್ನು ಡಿಜಿಟಲ್ ರೂಪ ಕೂಡುವುದೂ ಸೇರಿದಂತೆ ಅದನ್ನು ಸಂರಕ್ಷಿಸುವ ಕಾರ್ಯ ಮಾಡಲು ಸರಕಾರಕ್ಕೆ ಅನುದಾನ ಕೋರಲಾಗಿದೆ ಮತ್ತು ಕನ್ನಡದಲ್ಲೂ ಸಹ ಓಟಿಟಿ ಆರಂಭಿಸುವುದು ಅಗತ್ಯವಿದೆ.

ರಾಜ್ಯದ ನಾಲ್ಕು ವಿವಿಗಳನ್ನು ಗುರುತಿಸಿ, ಅವುಗಳಿಗೆ ರಾಜ್ಯ ಸರ್ಕಾರದಿಂದ ಅನುದಾನ ದೊರಕಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಅವರಿಗೆ ಕಾರ್ಯಗಾರಗಳನ್ನು ನಡೆಸಿ, ಇಂಡ್ರಸ್ಟ್ರಿ ತಜ್ಞರಿಂದ ತರಬೇತಿ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಎಂ.ಐಸಿ ಮಣಿಪಾಲದ ನಿರ್ದೇಶಕಿ ಡಾ. ಪದ್ಮಾರಾಣಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ಶ್ರೀರಾಜ್ ಗುಡಿ, ಮಣಿಪಾಲ ಪ್ರಸಾರ ವಿಭಾಗದ ಶುಭಾ ಹಾಜರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!